News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಕಾರಾತ್ಮಕತೆಯಲ್ಲಿ ಮುಳುಗಿರುವ ಪ್ರತಿಪಕ್ಷಗಳಿಗೆ ಭಾರತದ ಸಾಧನೆ ಕಾಣುತ್ತಿಲ್ಲ: ಮೋದಿ

ನವದೆಹಲಿ: “ನಮ್ಮ ಸಾಧನೆಗಳನ್ನು ನೋಡದೆ ಕೇವಲ ನಕಾರಾತ್ಮಕತೆಯಲ್ಲಿ ಮುಳುಗಿರುವ ಜನರಿದ್ದಾರೆ. ಅವರಿಗೆ ಭಾರತವು ಸ್ಟಾರ್ಟ್‌ಅಪ್‌ಗಳಲ್ಲಿ 3 ನೇ ಸ್ಥಾನವನ್ನು ತಲುಪಿರುವುದನ್ನು, ದೇಶದಲ್ಲಿ 108 ಯುನಿಕಾರ್ನ್ ಇರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಸಾಂಕ್ರಾಮಿಕ ಸಮಯದಲ್ಲಿ ಸಂಭವಿಸಿರವುದು ಅವರಿಗೆ ನುಂಗಲಾರದ ಸತ್ಯ” ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಇಂದು ಲೋಕಸಭೆಯಲ್ಲಿ ಮಾತನಾಡಿದ ಮೋದಿ, ಜನರು ನನ್ನ ಮೇಲೆ ನಂಬಿಕೆ ಇಟ್ಟಿರುವುದು ಪತ್ರಿಕೆಗಳ ಮುಖ್ಯಾಂಶಗಳು ಅಥವಾ ಟಿವಿ ನೋಡಿ ಅಲ್ಲ, ನನ್ನ ಅನೇಕ ವರ್ಷಗಳ ಸಮರ್ಪಣೆಯಿಂದಾಗಿ ಎಂದಿದ್ದಾರೆ.

ಸೇನೆಯು ಶೌರ್ಯವನ್ನು ತೋರಿಸಿದರೆ ಅದನೂ ಟೀಕಿಸುತ್ತಾರೆ. ತನಿಖಾ ಸಂಸ್ಥೆಗಳು ತಮ್ಮ ಕೆಲಸ ಮಾಡಿದರೆ ಅದಕ್ಕೂ ಟೀಕೆ ಮಾಡುತ್ತಾರೆ ಎಂದಿದ್ದಾರೆ.

ಉನ್ನತ ನಾಯಕರೊಬ್ಬರು ರಾಷ್ಟ್ರಪತಿಗಳನ್ನು ಅವಮಾನಿಸಿದರು. ಅವರು ಎಸ್ಟಿ ವಿರುದ್ಧ ದ್ವೇಷವನ್ನು ಪ್ರದರ್ಶಿಸಿದರು. ಇಂತಹ ವಿಷಯಗಳನ್ನು ಟಿವಿಯಲ್ಲಿ ಹೇಳಿದಾಗ ಒಳಗೊಳಗೇ ಇದ್ದ ದ್ವೇಷದ ಭಾವನೆ ಹೊರಬಂತು. ನಂತರ ಪತ್ರ ಬರೆದು ಆತ್ಮರಕ್ಷಣೆ ಮಾಡಿಕೊಳ್ಳುವ ಪ್ರಯತ್ನ ನಡೆದಿತು ಎಂದರು.

ಶತಮಾನಗಳ ಅತಿದೊಡ್ಡ ಸಾಂಕ್ರಾಮಿಕ, ಯುದ್ಧದಂತಹ ಪರಿಸ್ಥಿತಿ ಜಗತ್ತನ್ನು ಬಾಧಿಸಿದ ಸಂದರ್ಭದಲ್ಲೂ ಭಾರತ ತನ್ನನ್ನು ಸ್ಥಿರಗೊಳಿಸಿದ ರೀತಿ, ಅದು ಹೇಗೆ ತನ್ನನ್ನು ತಾನು ಸ್ಥಿರಪಡಿಸಿಕೊಂಡಿತು ಎಂಬ ಬಗ್ಗೆ ಇಡೀ ರಾಷ್ಟ್ರದಲ್ಲಿ ಆತ್ಮವಿಶ್ವಾಸ ಮತ್ತು ಹೆಮ್ಮೆ ತುಂಬಿದೆ ಎಂದಿದ್ದಾರೆ.

1.4 ಶತಕೋಟಿ ಭಾರತೀಯರು ಕೋವಿಡ್-19 ಸಾಂಕ್ರಾಮಿಕದ ಸವಾಲನ್ನು ಎದುರಿಸಿದರು.  ಆರ್ಥಿಕ ಸವಾಲುಗಳ ನಡೆವೆಯೂ ನಾವು 5 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಎಂಬುದು ಹೆಮ್ಮೆಯ ವಿಷಯವಾಗಿದೆ. ನಾವು G20 ಆತಿಥ್ಯ ವಹಿಸಿದ್ದೇವೆ ಎಂದು ನಮಗೆ ಹೆಮ್ಮೆ ಇದೆ ಆದರೆ ಇದರ ಬಗ್ಗೆ ಅತೃಪ್ತಿ ಹೊಂದಿರುವ ಕೆಲವರು ಇದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ನಮ್ಮ ನೆರೆಹೊರೆಯ ದೇಶಗಳು ಕಠಿಣ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯಗಳಲ್ಲಿ, ಭಾರತವು ಇನ್ನೂ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನದಲ್ಲಿದೆ. ಕೋವಿಡ್‌ನಿಂದ ಭಾರತ ಆತ್ಮವಿಶ್ವಾಸದಿಂದ ಹೊರಬಂದಿದೆ ಎಂದರು.

ರಾಷ್ಟ್ರಪತಿಗಳ ಭಾಷಣವನ್ನು ಯಾರೂ ಟೀಕಿಸಲಿಲ್ಲ, ಅವರು ಹೇಳಿದ್ದನ್ನು ಒಪ್ಪಿಕೊಂಡರು ಎಂದು ನನಗೆ ಸಂತೋಷವಾಗಿದೆ. ಸದನದಲ್ಲಿ ವಾಗ್ವಾದಗಳು ನಡೆಯುತ್ತವೆ ಆದರೆ ಇದು ಭಾರತಕ್ಕೆ ಹೆಮ್ಮೆಯ ಕ್ಷಣ ಎಂಬುದನ್ನು ನಾವು ಮರೆಯಬಾರದು ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top