News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚೀನಾದ ಬೇಹುಗಾರಿಕೆ ಬಲೂನ್‌ ಭಾರತವನ್ನೂ ಗುರಿಯಾಗಿಸಿದೆ: ವರದಿ

ವಾಷಿಂಗ್ಟನ್: ಚೀನಾದ ಬೇಹುಗಾರಿಕೆ ಬಲೂನ್ ಅನ್ನು ಯುಎಸ್ ಹೊಡೆದುರುಳಿಸಿದ ಘಟನೆ ಚೀನಾದ ನಿಜ ಸ್ವರೂಪವನ್ನು ಜಗತ್ತಿನ ಮುಂದೆ ಬಟಾ ಬಯಲು ಮಾಡಿದೆ. ಇದೀಗ ಅಮೆರಿಕ ಮಾತ್ರವಲ್ಲದೆ ಭಾರತ ಮತ್ತು ಜಪಾನ್ ಸೇರಿದಂತೆ ಹಲವಾರು ದೇಶಗಳನ್ನು ಗುರಿಯಾಗಿಟ್ಟುಕೊಂಡು ಪತ್ತೇದಾರಿ ಬಲೂನ್‌ಗಳನ್ನು ಚೀನಾ ಹಾರಿಬಿಟ್ಟಿತ್ತು ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ವಾಷಿಂಗ್ಟನ್ ಪೋಸ್ಟ್ ಮಂಗಳವಾರ ಹಲವಾರು ಅನಾಮಧೇಯ ರಕ್ಷಣಾ ಮತ್ತು ಗುಪ್ತಚರ ಅಧಿಕಾರಿಗಳ ಸಂದರ್ಶನಗಳನ್ನು ಆಧರಿಸಿ ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಚೀನಾದ ದಕ್ಷಿಣ ಕರಾವಳಿಯ ಹೈನಾನ್ ಪ್ರಾಂತ್ಯದಿಂದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಣ್ಗಾವಲು ಬಲೂನ್ ಜಪಾನ್, ಭಾರತ, ವಿಯೆಟ್ನಾಂ, ತೈವಾನ್ ಮತ್ತು ಫಿಲಿಪೈನ್ಸ್ ಸೇರಿದಂತೆ ಇತರ ದೇಶಗಳಲ್ಲಿನ ಮಿಲಿಟರಿ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಿದೆ ಎಂಬ ಆಘಾತಕಾರಿ ಮಾಹಿತಿಯನ್ನು ನೀಡಿದೆ.

ಶನಿವಾರ ಅಟ್ಲಾಂಟಿಕ್ ಮಹಾಸಾಗರದ ದಕ್ಷಿಣ ಕೆರೊಲಿನಾದ ಕರಾವಳಿಯಲ್ಲಿ ಪತ್ತೆಯಾದ ಚೀನಾದ ಬಲೂನ್‌ ಅನ್ನು ಅಮೆರಿಕ ಫೈಟರ್ ಜೆಟ್‌ನಿಂದ ಹೊಡೆದುರುಳಿಸಿತ್ತು. ಬಳಿಕ ಚೀನಾದ ಕಣ್ಗಾವಲು ಬಲೂನ್ ಪತ್ತೆಯಾದ ಬಗ್ಗೆ ಯುಎಸ್ ಅಧಿಕಾರಿಗಳು ಭಾರತ ಸೇರಿದಂತೆ ಅದರ ಮಿತ್ರರಾಷ್ಟ್ರಗಳಿಗೆ ವಿವರಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಸೋಮವಾರ, ಅಮೆರಿಕಾದ ಉಪ ಕಾರ್ಯದರ್ಶಿ ವೆಂಡಿ ಶೆರ್ಮನ್ ಅವರು ಸುಮಾರು 40 ರಾಯಭಾರ ಕಚೇರಿಗಳ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ಪಿಎಲ್‌ಎ (ಪೀಪಲ್ಸ್ ಲಿಬರೇಶನ್ ಆರ್ಮಿ) ವಾಯುಪಡೆಯಿಂದ ಭಾಗಶಃ ನಿರ್ವಹಿಸಲ್ಪಡುವ ಈ ಕಣ್ಗಾವಲು ಏರ್‌ಶಿಪ್‌ಗಳನ್ನು ಐದು ಖಂಡಗಳಲ್ಲಿ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

“ಈ ಬಲೂನ್‌ಗಳು ಎಲ್ಲಾ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಬಲೂನ್‌ಗಳ ಫ್ಲೀಟ್‌ನ ಭಾಗವಾಗಿದ್ದು, ಕಣ್ಗಾವಲು ಕಾರ್ಯಾಚರಣೆಗಳನ್ನು ನಡೆಸಲು ಅಭಿವೃದ್ಧಿಪಡಿಸಲಾಗಿದೆ, ಇದು ಇತರ ದೇಶಗಳ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ” ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top