News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೆಪೊ ದರ 25 ಮೂಲಾಂಶ ಹೆಚ್ಚಿಸಿ 6.5%ಕ್ಕೆ ನಿಗದಿಪಡಿಸಿದ ಆರ್‌ಬಿಐ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋ ದರದಲ್ಲಿ 25 ಮೂಲಾಂಶಗಳನ್ನು ಹೆಚ್ಚಳ ಮಾಡಿ, 6.5% ಕ್ಕೆ ನಿಗದಿಪಡಿಸಿದೆ.

ಕೇಂದ್ರ ಬಜೆಟ್ ಬಳಿಕ ಇಂದು ನಡೆದ ಮೊದಲ ಹಣಕಾಸು ನೀತಿ ಸಭೆಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿ ಕಾಂತ್ ದಾಸ್ ಅವರು ರೆಪೋ ದರ ಹೆಚ್ಚಳವನ್ನು ಪ್ರಕಟಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಆರ್‌ಬಿಐ 6ನೇ ಬಾರಿಗೆ ಬಡ್ಡಿ ದರವನ್ನು ಹೆಚ್ಚಿಸಿತ್ತು.

ದ್ವೈವಾರ್ಷಿಕ ಹಣಕಾಸು ನೀತಿ ಸಮಿತಿಯ ಬಹುತೇಕ ಸದಸ್ಯರು ಹಣದುಬ್ಬರ ನಿಯಂತ್ರಣ ಮಾಡಲು ಬಡ್ಡಿದರ ಹೆಚ್ಚಳದ ಪರವಾಗಿ ಮತ ನೀಡಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ 6.4 ಶೇಕಡ ಬೆಳವಣಿಗೆ ದರ ಇರಲಿದೆ ಮತ್ತು ಪ್ರಸಕ್ತ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣವು 6.5% ಆಗಿರಲಿದೆ ಎಂದು ಶಕ್ತಿಕಾಂತ್ ಮಾಹಿತಿ ನೀಡಿದ್ದಾರೆ. ಜಾಗತಿಕ ವಲಯದಲ್ಲಿ ಆರ್ಥಿಕ ಅನಿಶ್ಚಿತತೆ ಗೋಚರಿಸುತ್ತಿದ್ದರು ಭಾರತ ಚೇತರಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಹಣಕಾಸು ವರ್ಷದಲ್ಲಿ ಬೆಳವಣಿಗೆ ದರ ಶೇ.6.4ರಷ್ಟು ಇರಲಿದೆ ಎಂದು‌ ಆರ್‌ಬಿಐ ಅಂದಾಜಿಸಿದೆ. ಹಣಕಾಸು ಸಚಿವಾಲಯದ ಇತ್ತೀಚಿನ ಆರ್ಥಿಕ ಸಮೀಕ್ಷೆಯಲ್ಲಿ, 2023-24 ಕ್ಕೆ ಬೆಳವಣಿಗೆಯ ಪ್ರಕ್ಷೇಪಣವು ಶೇಕಡಾ 6-6.8 ರಷ್ಟಿತ್ತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top