News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದಾದ್ಯಂತ 44 ಡ್ರೋನ್ ತರಬೇತಿ ಶಾಲೆಗಳನ್ನು ಅನುಮೋದಿಸಿದೆ‌ ಕೇಂದ್ರ

ನವದೆಹಲಿ: ಡ್ರೋನ್‌ ತಂತ್ರಜ್ಞಾನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಉತ್ತೇಜನ ಪಡೆಯುತ್ತಿವೆ. ಹೀಗಾಗಿ ಸಹಜವಾಗಿಯೇ ಡ್ರೋನ್‌ ಹಾರಾಟ, ನಿರ್ವಹಣೆ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಗಳೂ ಜನರಲ್ಲಿ ಹೆಚ್ಚುತ್ತಿದೆ. ಇದಕ್ಕಾಗಿಯೇ ಸರ್ಕಾರ ದೇಶಾದ್ಯಂತ ಡ್ರೋನ್ ತರಬೇತಿ ಮತ್ತು ಕೌಶಲ್ಯಕ್ಕಾಗಿ ಶಾಲೆಗಳನ್ನು ತೆರೆಯುತ್ತಿದೆ.

ದೇಶದಾದ್ಯಂತ ಡ್ರೋನ್ ತರಬೇತಿ ಮತ್ತು ಕೌಶಲ್ಯವನ್ನು ಒದಗಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು 44 ತರಬೇತಿ ಶಾಲೆಗಳನ್ನು ಅನುಮೋದಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ ವಿ ಕೆ ಸಿಂಗ್ ಮಾತನಾಡಿ, ತರಬೇತಿ ಶಾಲೆಗಳು ಇಲ್ಲಿಯವರೆಗೆ 2,520 ಡ್ರೋನ್ ಪೈಲಟ್‌ಗಳನ್ನು ಪ್ರಮಾಣೀಕರಿಸಿವೆ. ದೇಶದಲ್ಲಿ ಡ್ರೋನ್ ಉದ್ಯಮ ಇನ್ನೂ ಉಗಮ ಹಂತದಲ್ಲಿದೆ ಎಂದರು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಡ್ರೋನ್‌ಗಳು ಮತ್ತು ಡ್ರೋನ್ ಘಟಕಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಅಡಿಯಲ್ಲಿ ಆರ್ಥಿಕ ಸಹಾಯಕ್ಕಾಗಿ 56 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗುತ್ತಿದೆ ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top