News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರಸ್ತುತ DRDO 55 ಮಿಷನ್ ಮೋಡ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ: ಕೇಂದ್ರ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಿಷನ್ ಮೋಡ್ ಯೋಜನೆಗಳನ್ನು ರೂಪಿಸಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಈ ಬಗ್ಗೆ ಮಾಹಿತಿ ನೀಡಿ, ಪ್ರಸ್ತುತ ಡಿಆರ್‌ಡಿಒ 55 ಮಿಷನ್ ಮೋಡ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

“ಇಂದು DRDO ಒಟ್ಟು 73942.82 ಕೋಟಿ ರೂ.ಗಳ ಮಂಜೂರಾದ ವೆಚ್ಚದಲ್ಲಿ 55 ಮಿಷನ್‌ ಮೋಡ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ” ಎಂದು ಭಟ್ ಹೇಳಿದ್ದಾರೆ.

ಈ ಯೋಜನೆಗಳು  ನ್ಯೂಕ್ಲಿಯರ್ ಡಿಫೆನ್ಸ್ ಟೆಕ್ನಾಲಜೀಸ್, ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ (AIP), ವಾರ್ ಸೂಟ್, ಪ್ರೊಪಲ್ಷನ್ ಸಿಸ್ಟಮ್, ಏರ್ ಡ್ರಾಪಬಲ್ ಕಂಟೈನರ್, ಟಾರ್ಪಿಡೊ, ಫೈಟರ್ ಏರ್‌ಕ್ರಾಫ್ಟ್, ಕ್ರೂಸ್ ಮಿಸೈಲ್, ಮಾನವರಹಿತ ವೈಮಾನಿಕ ವಾಹನ, AEW&C ಏರ್‌ಕ್ರಾಫ್ಟ್ ಸಿಸ್ಟಮ್, ಗ್ಯಾಸ್ ಟರ್ಬೈನ್ ವ್ಯವಸ್ಥೆ , ಅಸಾಲ್ಟ್ ರೈಫಲ್, ವಾರ್‌ಹೆಡ್, ಲೈಟ್ ಮೆಷಿನ್ ಗನ್, ರಾಕೆಟ್, ಅಡ್ವಾನ್ಸ್‌ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ (ಎಟಿಎಜಿಎಸ್), ರಾಡಾರ್‌ಗಳು, ಲೈಫ್ ಸಪೋರ್ಟ್ ಸಿಸ್ಟಂ, ಭೌಗೋಳಿಕ ಮಾಹಿತಿ ಕ್ಷಿಪಣಿ ವ್ಯವಸ್ಥೆ, ಹಡಗು ವಿರೋಧಿ ಕ್ಷಿಪಣಿ, ಏರ್‌ಫೀಲ್ಡ್ ವಿರೋಧಿ ಶಸ್ತ್ರಾಸ್ತ್ರ, ಗ್ಲೈಡ್ ಬಾಂಬ್, ಸಿಮ್ಯುಲೇಟರ್ ಇತ್ಯಾದಿ ಮುಂತಾದುವುಗಳಿಗೆ ಸಂಬಂಧಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top