News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿಂದೂಫೋಬಿಯಾ: ʼಮೋದಿ ಆ್ಯಂಡ್ ಮಿ‌ʼ ಪುಸ್ತಕ ನಿಷೇಧಿಸಿದ ಅಮೆಜಾನ್

ನವದೆಹಲಿ: ಅಮೆಜಾನ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗ ನಕಲಿ ಸೆಕ್ಯುಲರಿಸಂ  ಅಬ್ಬರ ಕಾಣುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ, ಲೇಖಕ ಸೌರವ್ ದತ್ ಅವರ “ಮೋದಿ ಮತ್ತು ಮಿ: ಅ ಪೊಲಿಟಿಕಲ್ ರೀವೇಕನಿಂಗ್” ಪುಸ್ತಕವನ್ನು ಅಮೆಜಾನ್‌ ನಿಷೇಧಿಸಿದೆ. ಹಿಂದುತ್ವ ವಿಷಯವನ್ನು ಒಳಗೊಂಡಿರುವ ಕಾರಣ ಇದು ನಿಷೇಧಕ್ಕೊಳಗಾಗಿದೆ.

ಲೇಖಕ ಸೌರವ್‌ ದತ್ ಈ ಬಗ್ಗೆ ಬಗ್ಗೆ ಕಳವಳ ವ್ಯಕ್ತಪಡಿಸಿ ಟ್ವಿಟ್‌ ಮಾಡಿದ್ದು, “ಅಮೆಜಾನ್‌ನಿಂದ ನನ್ನ ಪುಸ್ತಕವನ್ನು ನಿಷೇಧಿಸುವ ಸಂದೇಶವನ್ನು ಸ್ವೀಕರಿಸಲಾಗಿದೆ ಏಕೆಂದರೆ ಪುಸ್ತಕವನ್ನು ‘ಹಿಂದುತ್ವ ವಿಷಯದ ಸಾಹಿತ್ಯ’ ಎಂದು ನೋಡಲಾಗುತ್ತಿದೆ” ಎಂದಿದ್ದಾರೆ.

ಈ ಪುಸ್ತಕದಲ್ಲಿ, ಸೌರವ್ ದತ್ ಅವರು ನರೇಂದ್ರ ಮೋದಿಯವರ ಭಾರತವು ಅಲ್ಪಸಂಖ್ಯಾತ ಮತ-ಬ್ಯಾಂಕ್ ರಾಜಕೀಯ, ಓಲೈಕೆ  ವಿರುದ್ಧ ಹೇಗೆ ನಿಂತಿದೆ, ಭಾರತೀಯ ವಿರೋಧಿ ಮತ್ತು ಹಿಂದೂ ವಿರೋಧಿ ಭಾವನೆಗಳ ವಿರುದ್ಧ ಹೇಗೆ ಮತ್ತು ಏಕೆ ಪ್ರಬಲವಾದ ತಡೆಗೋಡೆಯಾಗಿದೆ. ಹೇಗೆ ಎಡಪಂಥೀಯ ಪ್ರಾಬಲ್ಯವಾದಿ ಸಿದ್ಧಾಂತವಾದಿಗಳಿಂದ ಧಾರ್ಮಿಕ ವಿಭಜನೆ,  ಭಾರತ ಮತ್ತು ಅದರಾಚೆಗಿನ ಹಿಂದೂಫೋಬಿಯಾದ  ಬೆದರಿಕೆಯನ್ನು ನಿಭಾಯಿಸುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

ಪುಸ್ತಕ ನಿಷೇಧದ ಬಳಿಕ, ಹಲವಾರು ನೆಟಿಜನ್‌ಗಳು ಅಮೆಜಾನ್‌ ಅನ್ನು ಪಕ್ಷಪಾತಿ ಮತ್ತು ಹಿಂದೂಪೋಬಿಕ್ ಎಂದು ಕರೆದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top