News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚೀನಾದ 138 ಬೆಟ್ಟಿಂಗ್, 94 ಲೋನ್ ಆ್ಯಪ್‌ ನಿಷೇಧಕ್ಕೆ ಮುಂದಾದ ಕೇಂದ್ರ

ನವದೆಹಲಿ: ತುರ್ತು ಮತ್ತು ಕ್ಷಿಪ್ರ ವೇಗದಲ್ಲಿ ಚೀನಾದ 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು 94 ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ.

ಈ ಆ್ಯಪ್‌ಗಳ ತುರ್ತು ನಿರ್ಬಂಧಿಸುವಿಕೆಯ ಕುರಿತು ಗೃಹ ಸಚಿವಾಲಯ ನೀಡಿದ ಶಿಫಾರಸಿನ ಮೇರೆಗೆ ಈ ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎರಡು ಸಚಿವಾಲಯಗಳಾದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ,  ಗೃಹ ವ್ಯವಹಾರಗಳ ಸಚಿವಾಲಯದ ನಡುವಿನ ಅಧಿಕೃತ ಸಂವಹನದ ಪ್ರಕಾರ  ಈ ಅಪ್ಲಿಕೇಶನ್‌ಗಳು ಐಟಿ ಕಾಯಿದೆಯ ಸೆಕ್ಷನ್ 69 ಅನ್ನು ಉಲ್ಲಂಘಿಸಿವೆ ಎಂದು ದೃಢಪಡಿಸಿದ ನಂತರ ಕ್ರಮವನ್ನು ಪ್ರಾರಂಭಿಸಲಾಗಿದೆ. ಇವುಗಳು ಭಾರತದ ವಿರುದ್ಧ ಪೂರ್ವಾಗ್ರಹವನ್ನುಂಟುಮಾಡುವ ವಿಷಯಗಳನ್ನು ಹೊಂದಿದೆ. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುತ್ತಿವೆ  ಎಂದು ವರದಿ ತಿಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top