News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಸ್ಸಾಂನಲ್ಲಿ ಬಾಲ್ಯ ವಿವಾಹ ವಿರುದ್ಧ ಅಭಿಯಾನ: 4000 ಪ್ರಕರಣ ಪತ್ತೆ

ನವದೆಹಲಿ: ಜನವರಿ 3 ರಿಂದ ಅಸ್ಸಾಂ ಬಾಲ್ಯ ವಿವಾಹಗಳ ವಿರುದ್ಧ ದೊಡ್ಡ ಅಭಿಯಾನವನ್ನು ಪ್ರಾರಂಭಿಸಿದ್ದು, ಇದರಡಿ ಇದುವರೆಗೆ 4,000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದ 4,000 ಕ್ಕೂ ಹೆಚ್ಚು ಪ್ರಕರಣಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಸ್ಸಾಂ ಸರ್ಕಾರವು ರಾಜ್ಯದಲ್ಲಿ ಬಾಲ್ಯವಿವಾಹದ ಪೀಡುಗನ್ನು ಕೊನೆಗೊಳಿಸುವ ಸಂಕಲ್ಪದಲ್ಲಿ ದೃಢವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಎಂ ಹೇಳಿದ್ದಾರೆ.

“ಇದುವರೆಗೆ ಅಸ್ಸಾಂ ಪೊಲೀಸರು ರಾಜ್ಯಾದ್ಯಂತ 4,004 ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಪೊಲೀಸ್ ಕ್ರಮದ ಸಾಧ್ಯತೆಯಿದೆ. ಫೆಬ್ರವರಿ 3 ರಿಂದ ಪ್ರಕರಣಗಳ ಮೇಲಿನ ಕ್ರಮ ಪ್ರಾರಂಭವಾಗುತ್ತದೆ. ಎಲ್ಲರೂ ಸಹಕರಿಸಲು ನಾನು ವಿನಂತಿಸುತ್ತೇನೆ”ಎಂದು ಅವರು ಹೇಳಿದ್ದಾರೆ.

ಬಾಲ್ಯ ವಿವಾಹ ದಮನದ ಭಾಗವಾಗಿ, ಜನವರಿ 2 ರಂದು ರಾತ್ರಿ ನಾಗಾವ್ ಮತ್ತು ಮೋರಿಗಾಂವ್ ಪ್ರದೇಶಗಳಲ್ಲಿ ಕನಿಷ್ಠ 7 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಬಾಲ್ಯವಿವಾಹದಲ್ಲಿ ತೊಡಗಿರುವ ಸಾವಿರಾರು ಜನರನ್ನು ನಾಳೆಯಿಂದ ಬಂಧಿಸಲಾಗುವುದು, ಮುಂದಿನ ಆರು ಅಥವಾ ಏಳು ದಿನಗಳಲ್ಲಿ, 18 ವರ್ಷದೊಳಗಿನ ಹುಡುಗಿಯರನ್ನು ವಿವಾಹವಾದ ಸಾವಿರಾರು ಯುವಕರು ಅಥವಾ ಪುರುಷರನ್ನು ಬಂಧಿಸಲಾಗುವುದು” ಎಂದು ಶರ್ಮಾ ಎಚ್ಚರಿಸಿದ್ದಾರೆ.

ಅಸ್ಸಾಂ ಕ್ಯಾಬಿನೆಟ್ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವ ಪುರುಷರಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಅಥವಾ ಪೋಕ್ಸೊ ಕಾಯ್ದೆಯಡಿ ದಂಡ ವಿಧಿಸಲು ನಿರ್ಧರಿಸಿದೆ ಎಂದು ಶರ್ಮಾ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top