News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

1.3 ಕೋಟಿ ದಾಟಿದ GeMನ ವಹಿವಾಟುಗಳ ಸಂಖ್ಯೆ

ನವದೆಹಲಿ: ಸರ್ಕಾರದ ಇ-ಮಾರುಕಟ್ಟೆ ಪ್ರಸಕ್ತ ಹಣಕಾಸು ವರ್ಷದಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಸರಕು ಮೌಲ್ಯವನ್ನು ಸಾಧಿಸಿದೆ. ಪ್ರಸ್ತುತ ಈ ದರದಲ್ಲಿ GeM ತನ್ನ ವಾರ್ಷಿಕ ಗುರಿಯಾದ 1.75 ಲಕ್ಷ ಕೋಟಿ ರೂಪಾಯಿಗಳನ್ನು ಮೀರುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.

GeM ತನ್ನ ಮಧ್ಯಸ್ಥಗಾರರ ಬೆಂಬಲದೊಂದಿಗೆ ಆರಂಭದಿಂದಲೂ 3 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಮರ್ಚಂಡೈಸ್ ಮೌಲ್ಯವನ್ನು ಮೀರಿಸಿದೆ. GeMನಲ್ಲಿನ ಒಟ್ಟು ವಹಿವಾಟುಗಳ ಸಂಖ್ಯೆಯೂ 1.3 ಕೋಟಿ ದಾಟಿದೆ.

GeM 66 ಸಾವಿರಕ್ಕೂ ಹೆಚ್ಚು ಸರ್ಕಾರಿ ಖರೀದಿದಾರ ಸಂಸ್ಥೆಗಳನ್ನು ಹೊಂದಿದೆ ಮತ್ತು 58 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು ವೈವಿಧ್ಯಮಯ ಸರಕು ಮತ್ತು ಸೇವೆಗಳನ್ನು ಒದಗಿಸುತ್ತಿದ್ದಾರೆ.

ಪೋರ್ಟಲ್ 29 ಲಕ್ಷಕ್ಕೂ ಹೆಚ್ಚು ಪಟ್ಟಿ ಮಾಡಲಾದ ಉತ್ಪನ್ನಗಳೊಂದಿಗೆ ಹನ್ನೊಂದು ಸಾವಿರಕ್ಕೂ ಹೆಚ್ಚು ಉತ್ಪನ್ನ ವಿಭಾಗಗಳನ್ನು ಹೊಂದಿದೆ, ಜೊತೆಗೆ 2.5 ಲಕ್ಷಕ್ಕೂ ಹೆಚ್ಚು ಸೇವಾ ಕೊಡುಗೆಗಳೊಂದಿಗೆ 270 ಕ್ಕೂ ಹೆಚ್ಚು ಸೇವಾ ವಿಭಾಗಗಳನ್ನು ಹೊಂದಿದೆ. ವಿವಿಧ ಅಧ್ಯಯನಗಳ ಆಧಾರದ ಮೇಲೆ, ಪ್ಲಾಟ್‌ಫಾರ್ಮ್‌ನಲ್ಲಿ ಕನಿಷ್ಠ ಉಳಿತಾಯವು ಶೇಕಡಾ 10 ರಷ್ಟಿದೆ, ಇದು 30 ಸಾವಿರ ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಹಣದ ಉಳಿತಾಯವಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top