News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಧ್ಯಪ್ರದೇಶ: ಇಸ್ಲಾಂ ನಗರಕ್ಕೆ ಜಗದೀಶ್‌ಪುರ ಎಂದು ಮರುನಾಮಕರಣ

ಭೋಪಾಲ್: ಮಧ್ಯಪ್ರದೇಶ ಸರ್ಕಾರವು ಭೋಪಾಲ್‌ನಲ್ಲಿರುವ ಇಸ್ಲಾಂ ನಗರ ಗ್ರಾಮದ ಹೆಸರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬದಲಾಯಿಸಿದ್ದು, ಈ ಗ್ರಾಮಕ್ಕೆ  ಜಗದೀಶ್‌ಪುರ ಎಂದು ಮರು ನಾಮಕರಣ ಮಾಡಿದೆ.‌

ರಾಜ್ಯ ಸರ್ಕಾರವು ಹೆಸರು ಬದಲಾವಣೆಗೆ ಗೆಜೆಟ್ ಆದೇಶದ ಮೂಲಕ ಸೂಚನೆ ನೀಡಿದೆ.

“ಭಾರತ ಸರ್ಕಾರ ಗೃಹ ಸಚಿವಾಲಯದ ಒಪ್ಪಿಗೆಯ ಮೇರೆಗೆ ರಾಜ್ಯ ಸರ್ಕಾರವು ಭೋಪಾಲ್ ಜಿಲ್ಲೆಯ ಇಸ್ಲಾಂ ನಗರ ಗ್ರಾಮದ ಹೆಸರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಗದೀಶ್‌ಪುರ ಎಂದು ಬದಲಾಯಿಸಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇಸ್ಲಾಂ ನಗರವು ಭೋಪಾಲ್-ಬೆರಾಸಿಯಾ ಹೆದ್ದಾರಿಯ ಮಧ್ಯಭಾಗದಲ್ಲಿದೆ. ಇದು ಭೋಪಾಲ್ ನಿಂದ ಸುಮಾರು 14 ಕಿಲೋಮೀಟರ್ ದೂರದಲ್ಲಿದೆ. ‘ಇಸ್ಲಾಂ ನಗರ’ ಒಂದು ಕಾಲದಲ್ಲಿ ಭೋಪಾಲ್ ರಾಜ್ಯದ ರಾಜಧಾನಿಯಾಗಿತ್ತು. ಭೋಪಾಲ್ ಅನ್ನು ಸ್ಥಾಪಿಸಿದ ನವಾಬ್ ದೋಸ್ತ್ ಮೊಹಮ್ಮದ್ ಖಾನ್ ಅವರ ಅರಮನೆಗಳ ಅವಶೇಷಗಳು ಇನ್ನೂ ಇಲ್ಲಿ ನೆಲೆಗೊಂಡಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top