ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮಿಷನರ್ ಮನ್ಪ್ರೀತ್ ವೋಹ್ರಾ ಅವರು ವಿಕ್ಟೋರಿಯಾದ ಪ್ರೀಮಿಯರ್ ಡೇನಿಯಲ್ ಆಂಡ್ರ್ಯೂ ಅವರನ್ನು ಭೇಟಿಯಾಗಿ ಮೆಲ್ಬೋರ್ನ್ನಲ್ಲಿ ಖಾಲಿಸ್ತಾನ್ ಪರ ಪಡೆಗಳು ಭಾರತೀಯರ ಮೇಲೆ ನಡೆಸಿದ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ
ಭಾನುವಾರ, ಮೆಲ್ಬೋರ್ನ್ನ ಫೆಡರೇಶನ್ ಸ್ಕ್ವೇರ್ನಲ್ಲಿ ಭಾರತೀಯ ಧ್ವಜವನ್ನು ಹಿಡಿದುಕೊಂಡಿದ್ದ ಭಾರತೀಯರ ಮೇಲೆ ಸುಮಾರು 30 ರಿಂದ 40 ಶಸ್ತ್ರಸಜ್ಜಿತ ಖಲಿಸ್ತಾನಿಗಳು ದಾಳಿ ನಡೆಸಿದ್ದರು. ಇದರಿಂದ ಹಲವರಿಗೆ ಗಂಭೀರ ಗಾಯಗಳಾಗಿವೆ. ಭಾರತ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಆಸ್ಟ್ರೇಲಿಯಾದಲ್ಲಿ ವಾಸಿಸುವ ಭಾರತೀಯ ವಲಸಿಗರಿಗೆ ಘಟನೆ ಆಘಾತ ನೀಡಿದೆ
“ಇಂದು ವಿಕ್ಟೋರಿಯಾದ ಪ್ರೀಮಿಯರ್ ಡೇನಿಯಲ್ ಆಂಡ್ರ್ಯೂ ಅವರನ್ನು ಭೇಟಿ ಮಾಡಿದೆವು. ನಮ್ಮ ಬಲವಾದ ಮತ್ತು ಬೆಳೆಯುತ್ತಿರುವ ದ್ವಿಪಕ್ಷೀಯ ಸಂಬಂಧದ ನಡುವೆ ನಿನ್ನೆ ಮೆಲ್ಬೋರ್ನ್ನಲ್ಲಿ ನಡೆದ ಹಿಂಸಾಚಾರ ಕಪ್ಪು ಚುಕ್ಕೆಯಾಗಿದೆ. ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಉಗ್ರವಾದಿ ಖಲಿಸ್ತಾನಿ ಗುಂಪುಗಳು ಮತ್ತಷ್ಟು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯುವುದು ಹೇಗೆ ಎಂದು ಚರ್ಚಿಸಲಾಗಿದೆ” ಎಂದು ವೋಹ್ರಾ ಸೋಮವಾರ ಟ್ವಿಟರ್ನಲ್ಲಿ ಬರೆದಿದ್ದಾರೆ.
ಅಷ್ಟೇ ಅಲ್ಲ, ಖಲಿಸ್ತಾನಿ ಉಗ್ರಗಾಮಿ ಗುಂಪುಗಳಿಂದ ದಾಳಿಗೊಳಗಾದ ಸ್ಥಳಗಳಲ್ಲಿ ಒಂದಾದ ಮೆಲ್ಬೋರ್ನ್ನಲ್ಲಿರುವ ಬಿಎಪಿಎಸ್ ಶಿರ್ ಸ್ವಾಮಿನಾರಾಯಣ ಮಂದಿರಕ್ಕೆ ಭಾರತೀಯ ಹೈಕಮಿಷನರ್ ಭೇಟಿ ನೀಡಿದರು.
It was a privilege to call on Premier of Victoria @DanielAndrewsMP today. Discussed our strong and growing bilateral relationship, the violence in Melbourne yesterday, and how to stop extremist Khalistani groups engaging in further activities prejudicial to peace and harmony. pic.twitter.com/BSA9xlGNX6
— Manpreet Vohra (@VohraManpreet) January 30, 2023
Paid respects today at the sacred BAPS Shri Swaminarayan Mandir in Melbourne, a place of spirituality and service. Discussed the peaceful community's concerns over recent attack by vandals, and the disturbing violence witnessed yesterday in Melbourne.@HCICanberra @cgimelbourne pic.twitter.com/kthxa5oJ7d
— Manpreet Vohra (@VohraManpreet) January 30, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.