News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಏರೋ ಇಂಡಿಯಾ: ಯಲಹಂಕ ವಾಯುನೆಲೆ ಸಮೀಪ ಮಾಂಸ ಮಾರಾಟ ನಿಷೇಧ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜನವರಿ 30 ರಿಂದ ಫೆಬ್ರವರಿ 20 ರವರೆಗೆ ಯಲಹಂಕದ ವಾಯುಪಡೆ ನಿಲ್ದಾಣದ 10 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಮಾಂಸ ಮತ್ತು ಮೀನು ಅಂಗಡಿಗಳು, ಮಾಂಸಾಹಾರಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲು ಆದೇಶ ಹೊರಡಿಸಿದೆ.

ಏರೋ ಇಂಡಿಯಾ ಪ್ರದರ್ಶನದ 14 ನೇ ಆವೃತ್ತಿಯ ತಯಾರಿ ಈಗ ಭರದಿಂದ ಸಾಗುತ್ತಿದೆ. ಫೆಬ್ರವರಿ 13 ರಿಂದ 17 ರವರೆಗೆ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಏರ್ ಶೋ ನಡೆಯಲಿದ್ದು, ಈ ಕಾರ್ಯಕ್ರಮದ ವೇಳೆ ಪಕ್ಷಿಗಳ ಹಾರಾಟ ಇರದಂತೆ ನೋಡಿಕೊಳ್ಳಲು ಮಾಂಸಾಹಾರಿ ಖಾದ್ಯಗಳನ್ನು ಬಡಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

ವೈಮಾನಿಕ ಪ್ರದರ್ಶನದ ಸಮಯದಲ್ಲಿ ಪಕ್ಷಿಗಳು ಮಾಂಸದಕ್ಕಾಗಿ ಹಾರಾಡುವುದರಿಂದ ವಿಮಾನಗಳಿಗೆ ಸಂಭಾವ್ಯ ಅಪಾಯವಾಗಬಹುದಾದ್ದರಿಂದ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಯಲಹಂಕ ವಲಯದ ಬಿಬಿಎಂಪಿ ಜಂಟಿ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಯಾವುದೇ ನಿಷೇಧವನ್ನು ಉಲ್ಲಂಘಿಸಿದರೆ ಬಿಬಿಎಂಪಿ ಕಾಯ್ದೆ 2020 ಮತ್ತು ಇಂಡಿಯನ್ ಏರ್‌ಕ್ರಾಫ್ಟ್ ನಿಯಮಗಳು 1937 ನಿಯಮ 91 ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಇದಲ್ಲದೆ, ಯಲಹಂಕ ವಾಯುಪಡೆ ನಿಲ್ದಾಣದ ಸುತ್ತ ಪಕ್ಷಿಗಳ ಸಂಚಾರವನ್ನು ತಡೆಯಲು ಮಣ್ಣಿನ ಮುಚ್ಚಳವನ್ನು ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಘೋಷಿಸಿದ್ದಾರೆ.

ಏರೋ ಇಂಡಿಯಾ ಪ್ರದರ್ಶನವು ವಾಯುಯಾನ ಉದ್ಯಮದಲ್ಲಿ ಒಂದು ಪ್ರಮುಖ ಕಾರ್ಯಕ್ರಮವಾಗಿದೆ ಮತ್ತು ಪ್ರಪಂಚದಾದ್ಯಂತದ ಅನೇಕ ಗಣ್ಯರು, ಪೈಲಟ್‌ಗಳು ಮತ್ತು ಉತ್ಸಾಹಿಗಳು ಭಾಗವಹಿಸುತ್ತಾರೆ.

‘ದ ರನ್‌ವೇ ಟು ಎ ಬಿಲಿಯನ್ ಅಪಾರ್ಚುನಿಟಿಸ್’ ಎಂಬ ವಿಷಯದ ಮೇಲೆ ಐದು ದಿನಗಳ ಏರೋ ಇಂಡಿಯಾ ಕಾರ್ಯಕ್ರಮವು ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ಒಟ್ಟು 35,000 ಚದರ ಮೀಟರ್ ಪ್ರದೇಶದಲ್ಲಿ ಆಯೋಜಿಸಲಾಗುತ್ತಿದ್ದು, ಅತಿದೊಡ್ಡ ಏರೋ ಶೋ ಎಂಬ ಹೆಗ್ಗಳಿಕೆ ಪಡೆಯಲಿದೆ. ಇದಕ್ಕಾಗಿ ಇದುವರೆಗೆ 700 ಕ್ಕೂ ಹೆಚ್ಚು ಪ್ರದರ್ಶಕರು ನೋಂದಾಯಿಸಿಕೊಂಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top