News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಡಾಖ್‌ನಲ್ಲಿ 14 ವರ್ಷದೊಳಗಿನವರಿಗೆ ಐಸ್‌ ಹಾಕಿ ತರಬೇತಿ ಆರಂಭ

ನವದೆಹಲಿ: ಲಡಾಖ್‌ನಲ್ಲಿ ಪ್ರಸ್ತುತ ತಾಪಮಾನದ ಕುಸಿತವಾಗುತ್ತಿರುವ ನಡುವೆ ಚಳಿಗಾಲದ ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ. ಇದೀಗ ಅಲ್ಲಿ ಐಸ್‌ ಹಾಕಿ ತರಬೇತಿ ಆರಂಭಗೊಂಡಿದೆ.

ಲಡಾಖ್ ವಲಯ ದೈಹಿಕ ಶಿಕ್ಷಣ ಅಧಿಕಾರಿ ಕಾರ್ಗಿಲ್ ಅವರು ಖ್ರೀ ಸುಲ್ತಾನ್ ಚೂ ಐಸ್ ಹಾಕಿ ಸ್ಟೇಡಿಯಂನಲ್ಲಿ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಬೇಸಿಕ್ ಐಸ್ ಹಾಕಿ ತರಬೇತಿ ಶಿಬಿರವನ್ನು ಆರಂಭಿಸಿದ್ದಾರೆ ತೆರೆದಿದ್ದಾರೆ.

ಶಿಬಿರಕ್ಕೆ 150ಕ್ಕೂ ಹೆಚ್ಚು ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

15 ದಿನಗಳ ತರಬೇತಿಯ ಸಂದರ್ಭದಲ್ಲಿ ತರಬೇತುದಾರರು ಆಟಗಾರರಿಗೆ ತರಬೇತಿ ಮತ್ತು ಸ್ಕೇಟಿಂಗ್, ಪಕ್ ಕಂಟ್ರೋಲ್, ಶೂಟಿಂಗ್, ಪಾಸಿಂಗ್ ಮತ್ತು ಟೀಮ್ ಪ್ಲೇಗಳ ಮೂಲಭೂತ ಕೌಶಲ್ಯವನ್ನು ಕಲಿಸಿ ಕೊಡಲಿದ್ದಾರೆ.

ಕಳೆದ 2-3 ವರ್ಷಗಳಲ್ಲಿ ಐಸ್ ಹಾಕಿ ಇಡೀ ಕಾರ್ಗಿಲ್ ಜಿಲ್ಲೆಯಲ್ಲಿ ಜನಪ್ರಿಯವಾಗಿದೆ ಮತ್ತು ಗ್ರಾಮೀಣ ಪ್ರದೇಶಗಳಿಗೂ ತಲುಪಿರುವುದು ಗಮನಾರ್ಹ ಸಂಗತಿಯಾಗಿದೆ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top