News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಎಸ್ ಸೇನಾ ದಾಳಿಗೆ ಉತ್ತರ ಸೊಮಾಲಿಯಾದಲ್ಲಿ 11 ಇಸಿಸ್‌ ಉಗ್ರರ ಸಾವು

ವಾಷಿಂಗ್ಟನ್:‌ ಅಮೆರಿಕಾ ಸೇನಾ ಕಾರ್ಯಾಚರಣೆಯು ಉತ್ತರ ಸೊಮಾಲಿಯಾದಲ್ಲಿ  ISIS ಉಗ್ರ ಸಂಘಟನೆಯ ಹಿರಿಯ ನಾಯಕ ಮತ್ತು ಅದರ 10 ಸದಸ್ಯರನ್ನು ಕೊಂದಿದೆ.

ಯುಎಸ್ ಅಧಿಕಾರಿಗಳ ಪ್ರಕಾರ, ಇಸ್ಲಾಮಿಕ್ ಸ್ಟೇಟ್ ಗುಂಪಿನ ಪ್ರಮುಖ ಪ್ರಾದೇಶಿಕ ನಾಯಕ ಬಿಲಾಲ್ ಅಲ್-ಸುಡಾನಿ ಉತ್ತರ ಸೊಮಾಲಿಯಾದಲ್ಲಿನ ಪರ್ವತ ಗುಹೆ ಸಂಕೀರ್ಣದಲ್ಲಿ ಯುಎಸ್ ಪಡೆಗಳು ನಡೆಸಿದ ದಾಳಿಯಲ್ಲಿ ಹತನಾಗಿದ್ದಾನೆ. ಘಟನಾ ಸ್ಥಳದಲ್ಲಿದ್ದ ಸುಡಾನಿಯ ಸುಮಾರು 10 ಇಸ್ಲಾಮಿಕ್ ಸ್ಟೇಟ್ ಉಗ್ರ ಸದಸ್ಯರು ಸಹ ಕೊಲ್ಲಲ್ಪಟ್ಟಿದ್ದಾರೆ.

“ಅಧ್ಯಕ್ಷರ ಆದೇಶದ ಮೇರೆಗೆ, ಯುಎಸ್ ಮಿಲಿಟರಿ ಉತ್ತರ ಸೊಮಾಲಿಯಾದಲ್ಲಿ ದಾಳಿ ಕಾರ್ಯಾಚರಣೆಯನ್ನು ನಡೆಸಿತು, ಇದು ಬಿಲಾಲ್ ಅಲ್-ಸುಡಾನಿ ಸೇರಿದಂತೆ ಹಲವಾರು ಐಸಿಸ್ ಸದಸ್ಯರ ಸಾವಿಗೆ ಕಾರಣವಾಯಿತು. ಉನ್ನತ ರಕ್ಷಣಾ, ಗುಪ್ತಚರ ಮತ್ತು ಭದ್ರತಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ ಯುಎಸ್ ಅಧ್ಯಕ್ಷರು ಈ ವಾರದ ಆರಂಭದಲ್ಲಿ ಕಾರ್ಯಾಚರಣೆಯನ್ನು ಅಧಿಕೃತಗೊಳಿಸಿದರು” ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಉತ್ತರ ಸೊಮಾಲಿಯಾದಲ್ಲಿನ ತನ್ನ ಪರ್ವತ ನೆಲೆಯಿಂದ ಅಲ್ ಸುಡಾನಿಯು ಆಫ್ರಿಕಾದಲ್ಲಿ ಮಾತ್ರವಲ್ಲದೆ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಖೊರಾಸಾನ್‌ನ IS ಶಾಖೆಗಳಿಗೆ ಹಣವನ್ನು ಒದಗಿಸಿದ್ದ ಮತ್ತು ಸಂಘಟಿಸುತ್ತಿದ್ದ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top