News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಳೆದ ವರ್ಷ 17, 756 ಮಕ್ಕಳನ್ನು ರಕ್ಷಿಸಿದೆ ರೈಲ್ವೇ ರಕ್ಷಣಾ ಪಡೆ

ನವದೆಹಲಿ: ಕಳೆದ ವರ್ಷ 17, 756 ಮಕ್ಕಳನ್ನು ರೈಲ್ವೇ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಕಳೆದುಹೋದ ಅಥವಾ ಅವರ ಕುಟುಂಬದಿಂದ ಬೇರ್ಪಟ್ಟ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳನ್ನು ಗುರುತಿಸುವ ಮತ್ತು ರಕ್ಷಿಸುವ ಉದಾತ್ತ ಕಾರ್ಯವನ್ನು ಆರ್‌ಪಿಎಫ್ ಕೈಗೊಳ್ಳುತ್ತಿದೆ ಎಂದು ಸಚಿವಾಲಯ ಹೇಳಿದೆ.

ರೈಲ್ವೇ ಸಂರಕ್ಷಣಾ ಪಡೆಯು ರೈಲ್ವೆಯ ಮೂಲಕ ಪ್ರಯಾಣಿಕರ ಸುರಕ್ಷತ ಪ್ರಯಾಣದ ಕಡೆಗೆ ವಿಶೇಷ ಗಮನವನ್ನು ನೀಡುತ್ತದೆ.

ಪ್ರಯಾಣಿಕರಿಗೆ ಸಂಬಂಧಿಸಿದ ವಿವಿಧ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿರುವ 5,700 ಅಪರಾಧಿಗಳನ್ನು ಆರ್‌ಪಿಎಫ್ ಕಳೆದ ವರ್ಷ ಬಂಧಿಸಿತ್ತು.

ಕಾರ್ಯಾಚರಣೆ ʼರೈಲ್ ಸುರಕ್ಷಾʼ ಅಡಿಯಲ್ಲಿ ಕಳೆದ ವರ್ಷ RPF ರೈಲ್ವೆ ಆಸ್ತಿಯ ಕಳ್ಳತನದ 6492 ಪ್ರಕರಣಗಳನ್ನು ದಾಖಲಿಸಿದೆ,  11268 ಅಪರಾಧಿಗಳನ್ನು ಬಂಧಿಸಿ 7.37 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top