News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 8th February 2023


×
Home About Us Advertise With s Contact Us

ಶೌರ್ಯ ಪ್ರಶಸ್ತಿಗೆ ಬಾಜನರಾದ ಕರ್ನಾಟಕದ ಮೂವರು ಮಕ್ಕಳು

ಬೆಂಗಳೂರು: ಪ್ರತಿ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ವೀರತ್ವ ಪ್ರದರ್ಶಿಸಿದ ಮಕ್ಕಳಿಗೆ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಬಾರಿಯ ಶೌರ್ಯ ಪ್ರಶಸ್ತಿಗೆ ಕರ್ನಾಟಕದ ಮೂವರು ಮಕ್ಕಳು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.

ಕೇಂದ್ರ ಸರ್ಕಾರ ಮತ್ತು ಭಾರತೀಯ ಬಾಲ ಕಲ್ಯಾಣ ಸಮಿತಿಯು ಇಂದು ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಿದೆ.

ಕರ್ನಾಟಕದ ಮೂರು ಮಕ್ಕಳು ಅಕ್ಕಿ ಗಿರಣಿಯಿಂದ ತಾಯಿಯನ್ನು ರಕ್ಷಿಸಿದ್ದ 8 ವರ್ಷದ ದೀಕ್ಷಿತ್‌, ಕಾರು ಅಪಘಾತದಲ್ಲಿ ಹೆತ್ತವರನ್ನು ಕಾಪಾಡಿದ್ದ ಕೀರ್ತಿ ವಿವೇಕ್‌ ಸಾಹುಕಾರ್‌ ಹಾಗೂ ಶಿರಸಿಯ ಮೂರೆಗಾರ್‌ ಫಾಲ್ಸ್‌ ನಲ್ಲಿ ಇಬ್ಬರು ಪ್ರವಾಸಿಗರನ್ನು ರಕ್ಷಿಸಿದ್ದ ಆದಿತ್ಯ ಮಲ್ಲಿಕಾರ್ಜುನ ಶಿವಳ್ಳಿ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ದೇಶದಾದ್ಯಂತ ಹಲವು ಮಕ್ಕಳು ಪ್ರಶಸ್ತಿಗೆ ಪಾತ್ರರಾಗಿದ್ದು, ಇಂದು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಎಲ್ಲರೂ ನಾಳೆ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗಲಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top