News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗಲು ಸಜ್ಜಾಗಿದೆ ಈಜಿಪ್ಟ್‌ ಸೇನಾಪಡೆ

ನವದೆಹಲಿ: ನಾಳೆ ನಡೆಯುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾರತದ ಸೇನಾಪಡೆಗಳ ಜೊತೆ ಈಜಿಪ್ಟ್‌ ಸೇನೆಯ ತುಕಡಿ ಕೂಡ ಪರೇಡ್‌ನಲ್ಲಿ ಭಾಗಿಯಾಗುತ್ತಿದೆ. ಈ ವರ್ಷದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಭಾಗಿಯಾಗಲಿದ್ದಾರೆ.

ಸೇನಾ ಅಧಿಕಾರಿಗಳ ಪ್ರಕಾರ, ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಈಜಿಪ್ಟ್‌ನ ಎಲ್ಲಾ ಮೂರು ಸೇವೆಗಳ  ವಾಯು, ಸೈನ್ಯ, ನೌಕಾಪಡೆ ತುಕಡಿ ಭಾಗಿಯಾಗುತ್ತಿವೆ. ಇದರಲ್ಲಿ ಸುಮಾರು 180 ಸಿಬ್ಬಂದಿ ಇದ್ದಾರೆ ಎಂದು ವರದಿಗಳು ತಿಳಿಸಿವೆ.

ಭಾರತದ ವೀರ ಸೈನಿಕರು ಕರ್ತವ್ಯ ಪಥದಲ್ಲಿ ಸಾಗಲು ಈಗಾಗಲೇ ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ. ಸೈನಿಕರ ಜೊತೆಗೆ, ಟ್ಯಾಂಕ್‌ಗಳಂತಹ ಮಿಲಿಟರಿ ವಾಹನಗಳು ಮತ್ತು ಕ್ಷಿಪಣಿಗಳಂತಹ ಉಪಕರಣಗಳು, ಸಾಂಸ್ಕೃತಿಕ ಟ್ಯಾಬ್‌ಲೋಗಳು ಸಹ ಪರೇಡ್‌ನಲ್ಲಿ ಭಾಗಿಯಾಗಿದೆ

ಭಾರತೀಯ ವಾಯುಪಡೆಯ ಗರುಡ್ ವಿಶೇಷ ಪಡೆಗಳು ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ತವ್ಯ ಪಥದಲ್ಲಿ ಸಾಗಲಿವೆ. ಸ್ಕ್ವಾಡ್ರನ್ ಲೀಡರ್ ಪಿಎಸ್ ಜೈತಾವತ್ ಅವರು ಭಾರತೀಯ ವಾಯುಪಡೆಯ ತುಕಡಿಯ ಭಾಗವಾಗಿ ಗರುಡ್ ತಂಡವನ್ನು ಮುನ್ನಡೆಸಲಿದ್ದಾರೆ

ಪರೇಡ್ ಸಂದರ್ಭದಲ್ಲಿ ಸೇನೆಯು ಮೇಡ್ ಇನ್ ಇಂಡಿಯಾ ಕ್ಷಿಪಣಿಗಳನ್ನೂ ಪ್ರದರ್ಶಿಸಲಿದೆ. ಫ್ಲೈ-ಪಾಸ್ಟ್‌ನಲ್ಲಿ 45 ವಾಯುಸೇನೆ ವಿಮಾನಗಳು, ನಾಲ್ಕು ಭಾರತೀಯ ಸೇನಾ ವಿಮಾನಗಳು ಮತ್ತು ಒಂದು ಭಾರತೀಯ ನೌಕಾಪಡೆಯ ವಿಮಾನ ಸೇರಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top