News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಬಯಸುತ್ತಿದೆ ಆ್ಯಪಲ್: ಗೋಯಲ್

ನವದೆಹಲಿ: ಜಾಗತಿಕ ಸಂಸ್ಥೆಗಳಿಗೆ ಭಾರತದಲ್ಲಿ ವ್ಯಾಪಾರದ ವಾತಾವರಣ ಪೂರಕವಾಗಿದ್ದು, ಇದರಿಂದಾಗಿ  ದೇಶವನ್ನು ತಮ್ಮ ನೆಲೆಯನ್ನಾಗಿ ಮಾಡಲು ಹಲವು ಸಂಸ್ಥೆಗಳು ಎದುರು ನೋಡುತ್ತಿವೆ.  ಐಫೋನ್ ತಯಾರಕ ಆ್ಯಪಲ್ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಿಸಲು ನೋಡುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಭಾರತವು ಕಾನೂನಿನ ನಿಯಮಗಳನ್ನು ಸರಳಗೊಳಿಸಿದೆ. ಪಾರದರ್ಶಕ ಸರ್ಕಾರಿ ನೀತಿಗಳು ಮತ್ತು ವ್ಯವಹಾರ ಮಾದರಿಗಳು ವಿದೇಶಿ ಹೂಡಿಕೆದಾರರಿಗೆ ಆದ್ಯತೆಯ ತಾಣವಾಗಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಕೆಲವು ವಿದೇಶಿ ಕಂಪನಿಗಳ ಯಶಸ್ಸಿನ ಕಥೆಗಳ ಕುರಿತು ಮಾತನಾಡಿದ ಅವರು, ಆ್ಯಪಲ್
ಈಗಾಗಲೇ ಭಾರತದಲ್ಲಿ ತಮ್ಮ ಉತ್ಪಾದನೆಯ ಸುಮಾರು 5-7 ಪ್ರತಿಶತವನ್ನು ಹೊಂದಿದೆ. ಅದು ತನ್ನ ಉತ್ಪಾದನೆಯನ್ನು ಶೇಕಡಾ 25 ಕ್ಕೆ ಏರಿಸುವ ಗುರಿಯನ್ನು ಹೊಂದಿದೆ.  ಭಾರತದಲ್ಲಿ ತಯಾರಿಸಿದ ತಮ್ಮ ಇತ್ತೀಚಿನ ಮಾಡೆಲ್‌ಗಳನ್ನು ಅದು ಭಾರತದಿಂದಲೇ ಬಿಡುಗಡೆ ಮಾಡಿದೆ ಎಂದು ಉದ್ಯಮ ಚೇಂಬರ್ CII ಆಯೋಜಿಸಿದ್ದ B20 ಇಂಡಿಯಾ ಇನ್ಸೆಪ್ಶನ್ ಮೀಟಿಂಗ್‌ನ ಉದ್ಘಾಟನಾ ಅಧಿವೇಶನದಲ್ಲಿ ಸಚಿವರು ಹೇಳಿದ್ದಾರೆ.

ಅರ್ಥ್ ಮೂವರ್ಸ್ ಮೆಷಿನ್ ವಲಯದಲ್ಲಿ ವಿದೇಶಿ ಕಂಪನಿಯ ಮತ್ತೊಂದು ಉದಾಹರಣೆಯನ್ನು ಉಲ್ಲೇಖಿಸಿದ ಸಚಿವರು, ಭಾರತದ ಉತ್ಪಾದನೆಯ ಸ್ಪರ್ಧಾತ್ಮಕತೆಯಿಂದಾಗಿ ಆ ಕಂಪನಿಯು ಈಗ 110 ದೇಶಗಳಿಗೆ ತಮ್ಮ ಉತ್ಪನ್ನಗಳನ್ನು ಭಾರತದಿಂದ ಕೈಗೆಟುಕುವ ಸ್ಪರ್ಧಾತ್ಮಕ ಬೆಲೆಯಲ್ಲಿ ಪೂರೈಸುತ್ತಿದೆ ಮತ್ತು ಹೊಸ ಲಾಂಚ್‌ಗಳನ್ನು ಮಾಡುತ್ತಿದೆ ಎಂದು ಹೇಳಿದರು.

ನವೆಂಬರ್ 2022 ರಲ್ಲಿ, ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತದಲ್ಲಿ ಆ್ಯಪಲ್
ಐಫೋನ್ ಉತ್ಪಾದಿಸುವ ಅತಿದೊಡ್ಡ ಘಟಕವು ಬೆಂಗಳೂರಿನ ಬಳಿಯ ಹೊಸೂರಿನಲ್ಲಿ ಬರುತ್ತಿದೆ, ಇದು ಸುಮಾರು 60,000 ಜನರಿಗೆ ಉದ್ಯೋಗ ನೀಡಲಿದೆ ಎಂದು ಹೇಳಿದ್ದರು.

ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ದೈತ್ಯರಾದ ಫಾಕ್ಸ್‌ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ತಯಾರಿಸಿದ ಐಫೋನ್‌ಗಳನ್ನು ಆ್ಯಪಲ್ ಕಂಪನಿಯು ಪಡೆಯುತ್ತದೆ.

ಜಾಗತಿಕ ಆರ್ಥಿಕ ಅನಿಶ್ಚಿತತೆಯ ಬಗ್ಗೆ ಕೇಳಿದಾಗ, ಇದು ಜಗತ್ತಿಗೆ ಸವಾಲಿನ ವರ್ಷವಾಗಿದೆ ಎಂದು ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top