News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಹಾರ ಬಿಕ್ಕಟ್ಟಿನ ಬಳಿಕ ವಿದ್ಯುತ್‌ ಅಭಾವಕ್ಕೆ ತತ್ತರಿಸಿದ ಪಾಕಿಸ್ಥಾನ

ಇಸ್ಲಾಮಾಬಾದ್: ಈಗಾಗಲೇ ಆಹಾರದ ಬಿಕ್ಕಟಿನಿಂದ ತತ್ತರಿಸಿ ಹೋಗಿರುವ ಪಾಕಿಸ್ಥಾನದಲ್ಲಿಈಗ ವಿದ್ಯುತ್ ಅಭಾವ ತಲೆದೋರಿದೆ. ಪಾಕಿಸ್ಥಾನದ ಪ್ರಮುಖ ನಗರಗಳು ವಿದ್ಯುತ್ ಇಲ್ಲದೆ ಪರದಾಡುತ್ತಿವೆ ಎಂದು ವರದಿಗಳು ತಿಳಿಸಿವೆ

“ಹಲವು ನಗರಗಳ ವಿವಿಧ ಭಾಗಗಳಲ್ಲಿ ವಿದ್ಯುತ್‌ ಸ್ಥಗಿತವಾದ ವರದಿಗಳು ಬಂದಿದೆ. ನಾವು ಸಮಸ್ಯೆಯನ್ನು ಪರಿಶೀಲಿಸುತ್ತಿದ್ದೇವೆ” ಎಂದು ಪಾಕಿಸ್ಥಾನದ ವಿದ್ಯುತ್‌ ಪ್ರಸರಣದ ವಕ್ತಾರ ಇಮ್ರಾನ್ ರಾಣಾ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಬೆಳವಣಿಗೆಯನ್ನು ದೃಢೀಕರಿಸಿದ ಪಾಕಿಸ್ತಾನದ ಜಿಯೋ ನ್ಯೂಸ್ ಕರಾಚಿ ಮತ್ತು ಲಾಹೋರ್‌ನ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ ಎಂದು ವರದಿ ಮಾಡಿದೆ.

“ಪಾಕಿಸ್ತಾನದಲ್ಲಿ ಬೆಳಿಗ್ಗೆ 7:30 ರಿಂದ ದೇಶಾದ್ಯಂತ ವಿದ್ಯುತ್ ಸ್ಥಗಿತಗೊಂಡಿದೆ” ಎಂದು ಪಾಕಿಸ್ತಾನಿ ಪತ್ರಕರ್ತ ಅಸದ್ ಅಲಿ ತೂರ್ ಟ್ವೀಟ್ ಮಾಡಿದ್ದಾರೆ.

ಕ್ವೆಟ್ಟಾ ಎಲೆಕ್ಟ್ರಿಕ್ ಸಪ್ಲೈ ಕಂಪನಿ (QESCO) ಪ್ರಕಾರ, ಬಲೂಚಿಸ್ತಾನದ 22 ಜಿಲ್ಲೆಗಳಲ್ಲಿ ವಿದ್ಯುತ್ ಇಲ್ಲ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಒಟ್ಟಿನಲ್ಲಿ ಆಹಾರಕ್ಕಾಗಿ ಹಾಹಾಕಾರ ಎದ್ದಿರುವ ಪಾಕಿಸ್ಥಾನ ಇದೀಗ ವಿದ್ಯುತ್‌ ಅಭಾವದಿಂದ ಮತ್ತಷ್ಟು ಕಂಗೆಡುವ ಪರಿಸ್ಥಿತಿಗೆ ತಲುಪಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top