News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯನ್ಸರ್‌ಗಳಿಗೆ ನಿಯಮ ರೂಪಿಸಿದ ಕೇಂದ್ರ

ನವದೆಹಲಿ: ಕೇಂದ್ರ ಸರ್ಕಾರ ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯನ್ಸರ್‌ಗಳಿಗೆ ಕೆಲವೊಂದು ನಿಯಮಗಳನ್ನು ರೂಪಿಸಿದ್ದು, ಇದಕ್ಕೆ ತಪ್ಪಿದರೆ ಭಾರೀ ದಂಡ ತೆರಬೇಕಾಗುತ್ತದೆ.

ಯಾವುದೇ ಉತ್ಪನ್ನಗಳು, ಸೇವೆಗಳು ಅಥವಾ ಯೋಜನೆಯನ್ನು ಪ್ರಚಾರಪಡಿಸುವ ಸಂದರ್ಭದಲ್ಲಿ ಉಡುಗೊರೆಗಳು, ಹೋಟೆಲ್ ವಸತಿ, ಇಕ್ವಿಟಿ, ರಿಯಾಯಿತಿಗಳು ಮತ್ತು ಅವಾರ್ಡ್ಸ್‌ ಮುಂತಾದ ಎಲ್ಲಾ ಮಾಹಿತಿಗಳನ್ನು  ಸೋಶಿಯನ್‌ ಮೀಡಿಯಾ ಇನ್‌ಫ್ಲೂಯನ್ಸರ್‌ಗಳು ಬಹಿರಂಗಪಡಿಸಬೇಕು ಎಂದು ನಿಯಮದಲ್ಲಿ ತಿಳಿಸಿದೆ.

2025 ರ ವೇಳೆಗೆ ರೂ 2,800 ಕೋಟಿಗೆ ತಲುಪುವ ಮತ್ತು ವಾರ್ಷಿಕವಾಗಿ 20 ಪ್ರತಿಶತದಷ್ಟು ಸೋಶಿಯಲ್‌ ಇನ್‌ಫ್ಲೂಯನ್ಸರ್ ಮಾರುಕಟ್ಟೆ ಬೆಳೆಯುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನಿಗ್ರಹಿಸುವ ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ನಿರಂತರ ಪ್ರಯತ್ನಗಳ ಭಾಗವಾಗಿ ಈ ನಿಯಮವನ್ನು ರೂಪಿಸಲಾಗಿದೆ.

ಸೆಲೆಬ್ರಿಟಿಗಳು, ಪ್ರಭಾವಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವರ್ಚುವಲ್ ಮೀಡಿಯಾ ಪ್ರಭಾವಿಗಳಿಗೆ  ‘ಎಂಡಾರ್ಸ್‌ಮೆಂಟ್ ನೋ ಹೌಸ್’ ಹೆಸರಿನ ಹೊಸ ಮಾರ್ಗಸೂಚಿಗಳನ್ನು ಗ್ರಾಹಕರ ವ್ಯವಹಾರಗಳ ಇಲಾಖೆ ಹೊರಡಿಸಿದೆ.

ನಿಯಮ ಉಲ್ಲಂಘನೆಯಾದ ಸಂದರ್ಭದಲ್ಲಿ, ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಅಡಿಯಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತಿಗೆ ದಂಡವು ಅನ್ವಯಿಸುತ್ತದೆ.

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ತಯಾರಕರು, ಜಾಹೀರಾತುದಾರರು ಮತ್ತು ಅನುಮೋದಕರಿಗೆ ರೂ 10 ಲಕ್ಷದವರೆಗೆ ದಂಡವನ್ನು ವಿಧಿಸಬಹುದು. ನಂತರದ ಅಪರಾಧಗಳಿಗೆ ರೂ 50 ಲಕ್ಷದವರೆಗೆ ದಂಡ ವಿಧಿಸಬಹುದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top