News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತ್ರಿಪುರಾ, ಮೇಘಾಲಯ, ಮಣಿಪುರ ರಾಜ್ಯ ಸ್ಥಾಪನಾ ದಿನ: ಮೋದಿ ಶುಭ ಹಾರೈಕೆ

ನವದೆಹಲಿ: ಇಂದು ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ಮಣಿಪುರ ಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯಗಳನ್ನು ಕೋರಿದ್ದಾರೆ.

ತ್ರಿಪುರಾ, ಮಣಿಪುರಗಳಿಗೆ ರಾಜ್ಯೋತ್ಸವದ ಶುಭಾಶಯ ಕೋರಿರುವ ಮೋದಿ, ಕಳೆದ ಕೆಲವು ವರ್ಷಗಳಲ್ಲಿ ಈ ರಾಜ್ಯಗಳು ಬೆಳವಣಿಗೆಯ ಪಥದಲ್ಲಿ ಸಾಗಿವೆ. ಹೀಗೆಯೇ ಈ ರಾಜ್ಯಗಳು ಬೆಳವಣಿಗೆಯ ವೇಗವನ್ನು ಮುಂದುವರಿಸಲಿ ಎಂದು ಹಾರೈಸಿದರು.

 ರಾಜ್ಯೋತ್ಸವ ದಿನದಂದು, ತ್ರಿಪುರಾದ ಜನರಿಗೆ ಶುಭಾಶಯಗಳು. ತ್ರಿಪುರಾದ ಬೆಳವಣಿಗೆಯ ಪಥಕ್ಕೆ ಕಳೆದ 5 ವರ್ಷಗಳು ಗಮನಾರ್ಹವಾಗಿವೆ. ಕೃಷಿಯಿಂದ ಉದ್ಯಮಕ್ಕೆ, ಶಿಕ್ಷಣದಿಂದ ಆರೋಗ್ಯಕ್ಕೆ, ರಾಜ್ಯವು ಮಹತ್ತರವಾದ ಪರಿವರ್ತನೆಯನ್ನು ಕಂಡಿದೆ. ಈ ಪ್ರವೃತ್ತಿ ಮುಂಬರುವ ದಿನಗಳಲ್ಲಿಯೂ ಮುಂದುವರಿಯಲಿ” ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮಣಿಪುರದ ಜನತೆಗೆ ಶುಭ ಹಾರೈಸಿರುವ ಪ್ರಧಾನಿ ಮೋದಿ, “ಮಣಿಪುರದ ಜನತೆಗೆ ರಾಜ್ಯೋತ್ಸವ ದಿನದ ಶುಭಾಶಯಗಳು. ಕಳೆದ ಕೆಲವು ವರ್ಷಗಳಿಂದ ರಾಜ್ಯವು ಹಲವಾರು ಹಂತಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಈ ರಾಜ್ಯದ ಜನರ ಆಕಾಂಕ್ಷೆಗಳು ಈಡೇರಲಿ ಮತ್ತು ಮಣಿಪುರವು ಭಾರತದ ಬೆಳವಣಿಗೆಯ ಪಥವನ್ನು ಬಲಪಡಿಸುವ ರಾಜ್ಯವಾಗು ಉಳಿಯಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

ಪ್ರಧಾನಿ ಮೋದಿ ಮೇಘಾಲಯದ ಜನರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. “ಮೇಘಾಲಯದ ಜನರಿಗೆ ಅವರ ರಾಜ್ಯೋತ್ಸವ ದಿನದಂದು ಶುಭಾಶಯಗಳು. ಈ ರಾಜ್ಯವು ಅದರ ರೋಮಾಂಚಕ ಸಂಸ್ಕೃತಿಗೆ ಹೆಸರುವಾಸಿಯಾಗಿದೆ, ಅದರಲ್ಲೂ ವಿಶೇಷವಾಗಿ ಸಂಗೀತ, ಕಲೆ ಮತ್ತು ಕ್ರೀಡೆಗಳೆಡೆಗಿನ ಉತ್ಸಾಹಕ್ಕೆ ಪ್ರಸಿದ್ಧವಾಗಿದೆ. ಮೇಘಾಲಯದ ಜನರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಮುಂಬರುವ ವರ್ಷಗಳಲ್ಲಿ ಮೇಘಾಲಯದ ನಿರಂತರ ಪ್ರಗತಿಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೇಘಾಲಯ ಮತ್ತು ತ್ರಿಪುರಾ ಈ ವರ್ಷ ಚುನಾವಣೆ ನಡೆಯಲಿದೆ. ತ್ರಿಪುರಾದಲ್ಲಿ ಬಿಜೆಪಿ ಆಡಳಿತಾರೂಢ ಪಕ್ಷವಾಗಿದ್ದರೆ, ಮೇಘಾಲಯದಲ್ಲಿ ಎನ್‌ಪಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ, ಈ ವರ್ಷ ಏಕಾಂಗಿಯಾಗಿ ವಿಧಾನಸಭೆ ಚುನಾವಣೆ ಎದುರಿಸಲು ಎನ್‌ಪಿಪಿ ನಿರ್ಧರಿಸಿದೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top