News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಬಲ್ ಎಂಜಿನ್ ಸರ್ಕಾರ ಜನರ ಆಶೋತ್ತರ ಈಡೇರಿಸುತ್ತಿದೆ: ಮೋದಿ

ಯಾದಗಿರಿ: ಹಿಂದಿನ ಸರ್ಕಾರಗಳು ಕೇವಲ ಮತ ರಾಜಕಾರಣ ಮಾತ್ರ ಮಾಡುತ್ತಿದ್ದವು. ಆದರೆ ನಮ್ಮ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಬಿಜೆಪಿ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೂ ಆದ್ಯತೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಯ ಲೋಕಾರ್ಪಣೆ ಮಾಡಿ ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿನ ಅಭಿವೃದ್ಧಿ ಕಾರ್ಯಗಳು ಶ್ಲಾಘನೀಯ. ಇದಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಅವರ ಸಚಿವರನ್ನು ಅಭಿನಂದಿಸುತ್ತೇನೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಮುಂದಿನ 25 ವರ್ಷಗಳ ಕನಸು ಹೊತ್ತು ನಾವು ಮುನ್ನಡೆಯುತ್ತಿದ್ದೇವೆ” ಎಂದು ಹೇಳಿದರು.

ಭಾರತವು ಅಭಿವೃದ್ಧಿ ಹೊಂದಲು ರಕ್ಷಣೆ ಮತ್ತು ಆಂತರಿಕ ಭದ್ರತೆಯೊಂದಿಗೆ ಉತ್ತಮ ಆಡಳಿತವೂ ಅತ್ಯಗತ್ಯ. ಡಬಲ್ ಎಂಜಿನ್ ಸರ್ಕಾರವು ಈ ಆಶಯ ಈಡೇರಿಸುತ್ತಿದೆ. ನಾವು ಘೋಷಿಸಿದ್ದ ಹಲವು ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಕರ್ನಾಟಕದಲ್ಲಿ ಹಲವು ಹೊಸ ಯೋಜನೆಗಳು ನಡೆಯುತ್ತಿವೆ. ನದಿಗಳ ಜೋಡಣೆಯಿಂದ ಬರಪೀಡಿತ ಪ್ರದೇಶಗಳ ಸಮಸ್ಯೆ ಪರಿಹರಿಸಲು ಯತ್ನಿಸುತ್ತಿದ್ದೇವೆ ಎಂದಿದ್ದಾರೆ.

ಪ್ರತಿ ಹನಿಗೆ ಹೆಚ್ಚು ಬೆಳೆ ಯೋಜನೆ ಕರ್ನಾಟಕದಲ್ಲಿಯೂ ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ. ಡಬಲ್ ಎಂಜಿನ್ ಸರ್ಕಾರವು ಅಂತರ್ಜಲ ವೃದ್ಧಿಗೂ ಸತತ ಪ್ರಯತ್ನ ಮಾಡುತ್ತಿದೆ. ಕೆರೆ-ಕುಂಟೆಗಳ ಪುನರುಜ್ಜೀವನಕ್ಕೆ ಒತ್ತು ಕೊಡುತ್ತಿದೆ ಎಂದಿದ್ದಾರೆ.

“ಇದು ಅಮೃತ ಕಾಲ. ಈ ಅಮೃತ ಕಾಲದಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬೇಕಾಗಿದೆ. ಭಾರತದ ಎಲ್ಲ ನಾಗರಿಕರಿಗೆ, ಕುಟುಂಬಗಳಿಗೆ, ರಾಜ್ಯಗಳು ಒಂದಾಗಿ ಪ್ರಯತ್ನಿಸಿದಾದ ಮಾತ್ರ ಭಾರತ ವಿಕಸಿತವಾಗಲಿದೆ. ರೈತರು, ಕಾರ್ಮಿಕರು ಮತ್ತು ಎಲ್ಲರ ಬದುಕು ಸುಧಾರಿಸಿದಾಗ ಮಾತ್ರ ಭಾರತ ಅಭಿವೃದ್ಧಿಯಾಗಲಿದೆ. ಕೃಷಿಯಲ್ಲಿ ಬೆಳೆ ಚೆನ್ನಾಗಿ ಬರಬೇಕು, ಕೈಗಾರಿಕೆಯಲ್ಲಿ ಉತ್ಪಾದನೆ ಚೆನ್ನಾಗಿ ಆಗಬೇಕು. ಆಗ ಭಾರತ ಅಭಿವೃದ್ಧಿಯಾಗಲಿದೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top