ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಕಲಬುರಗಿಗೆ ಆಗಮಿಸಿದ್ದು, ವಿಶೇಷ ವಿಮಾನದಲ್ಲಿ ಬಂದಿಳಿದ ಅವರನ್ನು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.
ಕಲಬುರಗಿಯಿಂದ ಪ್ರಧಾನಿ ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕು ಕೊಕೊಡೆಕಲ್ ಹೆಲಿಪ್ಯಾಡ್ಗೆ ತೆರಳಿದ್ದು, ಮಾರ್ಗದ ಇಕ್ಕೆಲಗಳಲ್ಲಿ ಜನರು ಅಪಾರ ಪ್ರಮಾಣದಲ್ಲಿ ಜಮಾಯಿಸಿ ಮೋದಿಯವರನ್ನು ಸ್ವಾಗತಿಸಿದ್ದಾರೆ. ಮೋದಿ ಕೂಡ ಜನರತ್ತ ಸಂಭ್ರಮದಿಂದ ಕೈಬೀಸುತ್ತಾ ಮುಂದೆ ಸಾಗಿದ್ದಾರೆ.
ಕೊಡೆಕಲ್ ತಾಲ್ಲೂಕಿನಲ್ಲಿ ಮೋದಿ ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ಮತ್ತು ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ನಡೆಯುವ ವೇದಿಕೆಯ ಮುಂಭಾಗ ಪ್ರಧಾನಿಯವರನ್ನು ಸ್ವಾಗತಿಸಲು ಕಲಾತಂಡಗಳು, ಸಾಂಪ್ರದಾಯಿಕ ಉಡುಗೆ ಲಂಬಾಣಿ ಉಡುಗೆಯಲ್ಲಿ ಮಹಿಳೆಯರು ಸಜ್ಜಾಗಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಜಲ್ ಜೀವನ್ ಮಿಷನ್ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಸರತ್ ಚೆನ್ನೈ ಎಕ್ಸ್ಪ್ರೆಸ್ ವೇ ಪ್ಯಾಕೇಜ್ 3ನೇ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಮೋದಿ ಭಾಗವಹಿಸಲಿದ್ದಾರೆ.
ಕಳೆದ 10 ದಿನಗಳಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿಯವರ ಎರಡನೇ ಕರ್ನಾಟಕ ರಾಜ್ಯ ಭೇಟಿಯಾಗಿದೆ.
Prime minister Narendra Modi arrived to Kalaburagi fom New Delhi by a special flight at 11.00 AM.
Governor Tawar Chand Ghelot, CM Bommai received him in the airport. Later he & oother VVIPs left for Kodekal to inaugurate NLBC Special Project.@XpressBengaluru— Ramkrishna Badseshi (@Ramkrishna_TNIE) January 19, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.