News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಣರಾಜ್ಯೋತ್ಸವ 2023: ಕರ್ತವ್ಯಪಥದಲ್ಲಿ ಪೂರ್ಣ ಉಡುಗೆ ಪೂರ್ವಾಭ್ಯಾಸ

ನವದೆಹಲಿ: ಗಣರಾಜ್ಯೋತ್ಸವ 2023 ರ ಪರೇಡ್‌ಗೆ ಪೂರ್ಣ ಉಡುಗೆ ಪೂರ್ವಾಭ್ಯಾಸ (ಫುಲ್‌ ಡ್ರೆಸ್‌ ರೆಹರ್ಸಲ್) ಗಳು ಇಂದು ಮುಂಜಾನೆ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಿತು. ರಾಷ್ಟ್ರ ರಾಜಧಾನಿಯು ಕೊರೆವ ಚಳಿಯ ನಡುವೆಯೂ ಎಲ್ಲರೂ ಉತ್ಸಾಹದಿಂದ ಪೂರ್ವಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಬ್ಯಾಂಡ್‌ಗಳು ನುಡಿಸುವ ಟ್ಯೂನ್‌ಗಳಿಗೆ ತಕ್ಕಂತೆ ವಿವಿಧ ತಂಡಗಳು ಕರ್ತವ್ಯ ಪಥದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದವು.

ಭಾರತದ 74 ನೇ ಗಣರಾಜ್ಯೋತ್ಸವವನ್ನು ಜನವರಿ 26, 2023 ರಂದು ಆಚರಿಸಲಾಗುತ್ತದೆ. ಸುಮಾರು 3 ವರ್ಷಗಳ ನಂತರ ಕಟ್ಟುನಿಟ್ಟಾದ ಕೋವಿಡ್‌ ನಿಮಯವಿಲ್ಲದೇ ಪರೇಡ್‌ ಜರುಗಲಿದೆ. ಈ ವರ್ಷದ ಗಣರಾಜ್ಯೋತ್ಸವವು ಹಲವಾರು ರಾಜ್ಯಗಳ ಟ್ಯಾಬ್ಲೋಗಳನ್ನುಹೊಂದಿರುತ್ತದೆ.

ರಾಷ್ಟ್ರೀಯ ರಾಜಧಾನಿಯಲ್ಲಿ ಮುಂಬರುವ ಗಣರಾಜ್ಯೋತ್ಸವ ಪರೇಡ್‌ನ ಭಾಗವಾಗಿ ಸಿಆರ್‌ಪಿಎಫ್‌ನ ಸಂಪೂರ್ಣ ಮಹಿಳಾ ಮೆರವಣಿಗೆ ಮತ್ತು ಬ್ಯಾಂಡ್ ತುಕಡಿಯೂ ಸಹ‌ ಇಂದಿನ ಪೂರ್ವಾಭ್ಯಾಸದಲ್ಲಿ ಭಾಗವಹಿಸಿದೆ.

ಭಾರತದ ಸೇನಾ ಪರಾಕ್ರಮ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶಿಸುವ ಪರೇಡ್ ಪ್ರತಿ ವರ್ಷ ಜನವರಿ 26 ರಂದು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ಮೂಲಕ ಕೆಂಪು ಕೋಟೆಗೆ ಕರ್ತವ್ಯ ಪಥದಲ್ಲಿ ಸಾಗುತ್ತದೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುತ್ತಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top