News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೆಹಲಿಯಲ್ಲಿ ಬೃಹತ್‌ ರೋಡ್‌ ಶೋ ನಡೆಸಿದ ಮೋದಿ

ನವದೆಹಲಿ: ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಇಂದು ನವದೆಹಲಿಯಲ್ಲಿ ಆರಂಭಗೊಂಡಿದೆ. ಇದರ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ರೋಡ್‌ ಶೋ ನಡೆಸಿದ್ದಾರೆ.

ಪಟೇಲ್ ಚೌಕ್‌ನಿಂದ ಸೆಂಟ್ರಲ್ ದೆಹಲಿಯ ಎನ್‌ಡಿಎಂಸಿ ಕೇಂದ್ರ ಕಚೇರಿವರೆಗೆ ಸುಮಾರು ಒಂದು ಕಿಲೋಮೀಟರ್ ಮೆಗಾ ರೋಡ್‌ಶೋ ಅನ್ನು  ಪ್ರಧಾನಿ ಮೋದಿ ನಡೆಸಿದ್ದು, ಬಳಿಕ ರಾಷ್ಟ್ರೀಯ ಕಾರ್ಯಕಾರಿಣಿ‌ ನಡೆಯುವ ಸ್ಥಳಕ್ಕೆ ಆಗಮಿಸಿದ್ದಾರೆ.

ರೋಡ್‌ ಶೋ ವೇಳೆ ಅಪಾರ ಜನಸ್ತೋಮ ಜಮಾಯಿಸಿದ್ದು, ಮೋದಿ ಎಲ್ಲರತ್ತ ಕೈಬೀಸಿದ್ದಾರೆ.

ಕಾರ್ಯಕಾರಿಣಿ ಸಭೆಯ ಹಿನ್ನೆಲೆಯಲ್ಲಿ ಪ್ರಧಾನಿಯವರ ಬೃಹತ್ ಕಟೌಟ್‌ಗಳನ್ನು ರಸ್ತೆಯುದ್ದಕ್ಕೂ ಇರಿಸಲಾಗಿದ್ದು, ಜೊತೆಗೆ ಸರ್ಕಾರದ ವಿವಿಧ ಉಪಕ್ರಮಗಳು ಮತ್ತು ಭಾರತದ ಜಿ 20 ಅಧ್ಯಕ್ಷೀಯತೆಯನ್ನು ಎತ್ತಿ ತೋರಿಸುವ ಹಲವಾರು ಪೋಸ್ಟರ್‌ಗಳು ರಾರಾಜಿಸುತ್ತಿವೆ. ಸ್ಥಳಗಳಲ್ಲಿ ವೇದಿಕೆಗಳನ್ನು ನಿರ್ಮಿಸಲಾಗಿದೆ. ಹಲವಾರು ರಾಜ್ಯಗಳ ಜನಪದ ಕಲಾವಿದರು ಕೆಲವರ ಮೇಲೆ ಪ್ರದರ್ಶನ ನೀಡಿದರೆ ಇನ್ನು ಕೆಲವರು ದೇಶಭಕ್ತಿ ಗೀತೆಗಳನ್ನು ಮೊಳಗಿಸಿದರು.

ಕಾರ್ಯಕಾರಿಣಿ ಸಭೆಯು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧಿಕಾರಾವಧಿ ವಿಸ್ತರಣೆಯನ್ನು ಅನುಮೋದಿಸುವ ಸಾಧ್ಯತೆಯಿದೆ ಮತ್ತು ವಿಧಾನಸಭೆ ಮತ್ತು ಸಾರ್ವತ್ರಿಕ ಚುನಾವಣೆಗಳಿಗೆ  ಕಾರ್ಯತಂತ್ರ ರೂಪಿಸಲಿದೆ.

ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಮಂತ್ರಿಯವರೊಂದಿಗೆ 35 ಕೇಂದ್ರ ಸಚಿವರು, 12 ಮುಖ್ಯಮಂತ್ರಿಗಳು ಮತ್ತು 37 ಪ್ರಾದೇಶಿಕ ಮುಖ್ಯಸ್ಥರು ಇರುತ್ತಾರೆ. ಪಕ್ಷದ 350 ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

 

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top