News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2030 ರ ವೇಳೆಗೆ ತನ್ನ ಮಿಲಿಟರಿ ಬಲವನ್ನು ಅರ್ಧಕ್ಕೆ ಇಳಿಸಲಿದೆ ಶ್ರೀಲಂಕಾ

ಕೊಲಂಬೊ: ನಗದು ಕೊರತೆಯಿಂದ ಬಳಲುತ್ತಿರುವ ಶ್ರೀಲಂಕಾ 2030 ರ ವೇಳೆಗೆ ತನ್ನ ಮಿಲಿಟರಿಯ ಪ್ರಸ್ತುತ ಬಲವನ್ನು ಅರ್ಧಕ್ಕೆ ಇಳಿಸುವ ಯೋಜನೆಯನ್ನು ಶುಕ್ರವಾರ ಪ್ರಕಟಿಸಿದೆ. 2023 ರ ಬಜೆಟ್‌ನಲ್ಲಿ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣಕ್ಕೆ ಮೀಸಲಿಟ್ಟ ಹಣಕ್ಕಿಂತಲೂ ರಕ್ಷಣೆಗೆ ಹೆಚ್ಚು ಹಣ ಮೀಸಲಿಟ್ಟಿದೆ ಎಂಬ ಟೀಕೆಗಳನ್ನು ಶ್ರೀಲಂಕಾ ಸರ್ಕಾರ ಎದುರಿಸಿತ್ತು.

ಸೇನೆಯ ಬಲವನ್ನು 2030 ರ ವೇಳೆಗೆ 100,000 ಕ್ಕೆ ಇಳಿಸಲಾಗುವುದು  ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ. ಪ್ರಸ್ತುತ ಅಲ್ಲಿನ ಸೇನಾ ಬಲ 200,783 ಇದೆ. ಮುಂದಿನ ವರ್ಷದ ವೇಳೆಗೆ ಬಲವನ್ನು 135,000 ಕ್ಕೆ ಸೀಮಿತಗೊಳಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

“ಮುಂಬರುವ ಭದ್ರತಾ ಸವಾಲುಗಳನ್ನು ಎದುರಿಸಲು 2030 ರ ವೇಳೆಗೆ ತಾಂತ್ರಿಕವಾಗಿ ಮತ್ತು ಯುದ್ಧತಂತ್ರದ ಉತ್ತಮ ಮತ್ತು ಸಮತೋಲಿತ ರಕ್ಷಣಾ ಪಡೆಗಳನ್ನು ತರುವುದು ಕಾರ್ಯತಂತ್ರದ ನೀಲನಕ್ಷೆಯ ಒಟ್ಟಾರೆ ಗುರಿಯಾಗಿದೆ” ಎಂದು ರಕ್ಷಣಾ ರಾಜ್ಯ ಸಚಿವ ಪ್ರಮಿತಾ ಬಂಡಾರ ತೆನ್ನಕೋನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2023 ರ ಬಜೆಟ್‌ನಲ್ಲಿ 539 ಶತಕೋಟಿ ರೂಪಾಯಿಗಳ ರಕ್ಷಣಾ ಹಂಚಿಕೆಯು ಟೀಕೆಗೆ ಗುರಿಯಾಗಿತ್ತು,  ದ್ವೀಪ ರಾಷ್ಟ್ರವು 1948 ರ ಬಳಿಕದ ಅತಿ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ನಡುವೆ ಹೆಚ್ಚಿನ ರಕ್ಷಣಾ ವೆಚ್ಚ ಭರಿಸುವ ಸಾಮರ್ಥ್ಯ ಅದಕ್ಕಿಲ್ಲ.

ವಿದೇಶಿ ವಿನಿಮಯ ಕೊರತೆಯಿಂದಾಗಿ, ಇಂಧನ, ರಸಗೊಬ್ಬರಗಳು ಮತ್ತು ಔಷಧಿಗಳು ಸೇರಿದಂತೆ ಪ್ರಮುಖ ಆಮದುಗಳನ್ನು ಪಡೆಯಲು ಶ್ರೀಲಂಕಾಕ್ಕೆ ಸಾಧ್ಯವಾಗುತ್ತಿಲ್ಲ.

ಆರೋಗ್ಯ ಮತ್ತು ಶಿಕ್ಷಣಕ್ಕಾಗಿ, 2023 ರ ಬಜೆಟ್‌ನಲ್ಲಿ ತಲಾ 300 ಶತಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.

2009 ರಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಯೊಂದಿಗಿನ ಸಂಘರ್ಷವು ಕೊನೆಗೊಂಡಾಗಿನಿಂದ ಶ್ರೀಲಂಕಾ ತನ್ನ ಸೇನಾ ಬಲವನ್ನು ಸುಮಾರು ಅರ್ಧದಷ್ಟು ಕಡಿಮೆಗೊಳಿಸಿದ್ದರೂ, ಪ್ರಸ್ತುತ 200,000 ಬಲ ಅದಕ್ಕೆ ದುಬಾರಿಯಾಗಿ ಪರಿಣಮಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top