News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼವೀರ್‌ ಗಾರ್ಡಿಯನ್‌ʼ ಸಮರಭ್ಯಾಸಕ್ಕಾಗಿ ಜಪಾನ್‌ಗೆ ಸುಖೋಯ್‌ ಹಾರಿಸಿದ ಅವನಿ ಚತುರ್ವೇದಿ

ನವದೆಹಲಿ: ವಾಯುಸೇನೆಯ ಸ್ಕ್ವಾಡ್ರನ್‌ ಲೀಡರ್ ಅವನಿ ಚತುರ್ವೇದಿ ಅವರು ಪೈಲಟ್ ಮಾಡಿದ ಸುಖೋಯ್ 30 Mki ಇಂದು ಜಪಾನ್‌ನೊಂದಿಗೆ ವೈಮಾನಿಕ ಸಮರಾಭ್ಯಾಸ ʼವೀರ ಗಾರ್ಡಿಯನ್‌-2023ʼರಲ್ಲಿ ಭಾಗವಹಿಸಲು ಜಪಾನ್‌ಗೆ ಬಂದಿಳಿದೆ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಯುದ್ಧವಿಮಾನವನ್ನು ಮತ್ತೊಂದು ರಾಷ್ಟ್ರಕ್ಕೆ ಹಾರಿಸಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ವಿದೇಶಿ ನೆಲದಲ್ಲಿ ಭಾರತೀಯ ಫೈಟರ್ ಸ್ಕ್ವಾಡ್ರನ್ ಅನ್ನು ಮಹಿಳಾ ವಾಯು ಯೋಧರೊಬ್ಬರು ಮುನ್ನಡೆಸುತ್ತಿರುವುದು ಇದು ಮೊದಲ ನಿದರ್ಶನ. ಅವನಿ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

‘ವೀರ್ ಗಾರ್ಡಿಯನ್ 2023’ ಎಂಬ ಶೀರ್ಷಿಕೆಯ ಈ ಸಮರಾಭ್ಯಾಸವು ಜನವರಿ 12 ರಿಂದ 26 ರವರೆಗೆ ಒಮಿಟಮಾದಲ್ಲಿನ ಹಯಕುರಿ ಏರ್ ಬೇಸ್ ಮತ್ತು ಸಯಾಮಾದ ಇರುಮಾ ಏರ್ ಬೇಸ್‌ನಲ್ಲಿ ನಡೆಯಲಿದೆ. ಎರಡು ದೇಶಗಳ ನಡುವೆ ವಾಯು ರಕ್ಷಣಾ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ಯುದ್ಧದ ಚಟುವಟಿಕೆಗಳು ಇಲ್ಲಿ ನಡೆಯಲಿದೆ.

ಭಾರತೀಯ ವಾಯುಸೇನೆಯ ತಂಡ ನಾಲ್ಕು Su-30 MKI, ಎರಡು C-17 ನೊಂದಿಗೆ ಭಾಗವಹಿಸುತ್ತಿದೆ.

ನಾಲ್ಕು F-2 ಮತ್ತು ನಾಲ್ಕು F-15 ವಿಮಾನಗಳೊಂದಿಗೆ ಜಪಾನ್ ಏರ್ ಸೆಲ್ಫ್ ಡಿಫೆನ್ಸ್ ಫೋರ್ಸ್  ಭಾಗವಹಿಸಲಿದೆ.

ಸ್ಕ್ವಾಡ್ರನ್ ಲೀಡರ್ ಚತುರ್ವೇದಿ ಅವರನ್ನು ಜೂನ್ 2016 ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಕ್ವಾಡ್ರನ್‌ಗೆ ಮೋಹನ ಜಿತರ್ವಾಲ್ ಮತ್ತು ಭಾವನಾ ಕಾಂತ್ ಜೊತೆಗೆ ಸೇರಿಸಿಕೊಳ್ಳಲಾಯಿತು. 2018 ರಲ್ಲಿ, ಅವರು MiG-21 ವಿಮಾನದಲ್ಲಿ ಏಕಾಂಗಿಯಾಗಿ ಹಾರಾಟ ನಡೆಸಿದ ಮೊದಲ ಭಾರತೀಯ ಮಹಿಳಾ ಪೈಲಟ್ ಆದರು. ಅದೇ ವರ್ಷ, ಅವರು ಫ್ಲೈಟ್ ಲೆಫ್ಟಿನೆಂಟ್ ಹುದ್ದೆಗೆ ಬಡ್ತಿ ಪಡೆದರು.

ಮಾರ್ಚ್ 2020 ರಲ್ಲಿ, ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ನಾರಿ ಶಕ್ತಿ ಪುರಸ್ಕಾರವನ್ನು ನೀಡಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top