News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಸ್ಟ್ರೇಲಿಯಾ: ಹಿಂದೂ ದೇಗುಲದ ಮೇಲೆ ಖಲಿಸ್ತಾನಿಗಳ ದಾಳಿ

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್ ಬೆಂಬಲಿಗರು‌ ದಾಳಿ ಮಾಡಿ, ಭಾರತ ವಿರೋಧಿ ಬರಹದಿಂದ ಗೋಡೆಯನ್ನು ವಿರೂಪಗೊಳಿಸಲಾಗಿದೆ.

ಮೆಲ್ಬೋರ್ನ್‌ನ ಉತ್ತರ ಉಪನಗರ ಮಿಲ್ ಪಾರ್ಕ್‌ನಲ್ಲಿರುವ ಪ್ರಮುಖ  ಸ್ವಾಮಿನಾರಾಯಣ ದೇವಸ್ಥಾನದ ಗೋಡೆಗಳನ್ನು ಭಾರತ ವಿರೋಧಿ ಮತ್ತು ಖಲಿಸ್ತಾನ್ ಪರ ಬರಹದಿಂದ ವಿರೂಪಗೊಳಿಸಲಾಗಿದೆ ಎಂದು ದಿ ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.

“ಇಂದು ಬೆಳಿಗ್ಗೆ ನಾನು ದೇವಸ್ಥಾನವನ್ನು ತಲುಪಿದಾಗ ಎಲ್ಲಾ ಗೋಡೆಗಳು ಹಿಂದೂಗಳ ವಿರುದ್ಧ ಖಲಿಸ್ತಾನಿ ದ್ವೇಷದ ಗೀಚುಬರಹದಿಂದ ಕೂಡಿದ್ದವು” ಎಂದು ವ್ಯಕ್ತಿಯೊಬ್ಬರ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯ ಪ್ರಕಾರ, ಖಲಿಸ್ತಾನಿ ಗೂಂಡಾಗಳು ಬಾಪ್ಸ್ ಸ್ವಾಮಿನಾರಾಯಣ ಮಂದಿರವನ್ನು ಧ್ವಂಸಗೊಳಿಸುವ ತಮ್ಮ ಹೇಯ ಕೃತ್ಯದ ವೀಡಿಯೊವನ್ನು‌ ಕೂಡ ರೆಕಾರ್ಡ್ ಮಾಡಿದ್ದಾರೆ ಮತ್ತು ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

BAPS ಸ್ವಾಮಿನಾರಾಯಣ ಸಂಸ್ಥಾ ಆಸ್ಟ್ರೇಲಿಯಾವು ಶಾಂತಿಗಾಗಿ ಮನವಿ ಮಾಡಿದ್ದು, “ಸಾಮಾಜಿಕ ವಿರೋಧಿಗಳಿಂದ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಮಿಲ್ ಪಾರ್ಕ್‌ನಲ್ಲಿರುವ BAPS ಶ್ರೀ ಸ್ವಾಮಿನಾರಾಯಣ ಮಂದಿರದ ಗೇಟ್‌ಗಳಲ್ಲಿ ಭಾರತ ವಿರೋಧಿ ಬರಹದಿಂದ ತೀವ್ರ ದುಃಖಿತವಾಗಿದ್ದೇವೆ. ಎಲ್ಲರೂ ಶಾಂತಿ ಕಾಪಾಡಬೇಕು” ಎಂದು ಹೇಳಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top