News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುಂದಿನ 3 ತಿಂಗಳಲ್ಲಿ 3 ಪ್ರಮುಖ ರಾಕೆಟ್ ಉಡಾವಣೆಗಳನ್ನು ಯೋಜಿಸಿದೆ ಇಸ್ರೋ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಮುಂದಿನ ಮೂರು ತಿಂಗಳಲ್ಲಿ ಮೂರು ಪ್ರಮುಖ ರಾಕೆಟ್ ಉಡಾವಣೆಗಳನ್ನು ಯೋಜಿಸಿದೆ ಎಂದು ಅದರ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.

ಈ ರಾಕೆಟ್‌ಗಳು ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್‌ಎಸ್‌ಎಲ್‌ವಿ), ಲಾಂಚ್ ವೆಹಿಕಲ್ ಮಾರ್ಕ್ -3 (ಎಲ್‌ವಿಎಂ -3) ಮತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಆಗಿದೆ  ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದ್ದಾರೆ.

“ಜನವರಿ ಮತ್ತು ಫೆಬ್ರವರಿ ಅಂತ್ಯದ ವೇಳೆಗೆ, ನಾವು ಎಸ್‌ಎಸ್‌ಎಲ್‌ವಿ ಉಡಾವಣೆಯನ್ನು ಯೋಜಿಸುತ್ತಿದ್ದೇವೆ. ನಂತರ ಎಲ್‌ವಿಎಂ-3 ಮುಂದಿನ ಮಿಷನ್ ಒನ್ ವೆಬ್ – ವಾಣಿಜ್ಯ ಉಡಾವಣೆ ನಡೆಯಲಿದೆ. ಅದರ ನಂತರ ಮತ್ತೆ ವಾಣಿಜ್ಯ ಉದ್ದೇಶಕ್ಕಾಗಿ ಪಿಎಸ್‌ಎಲ್‌ವಿ ಉಡಾವಣೆ ನಡೆಯಲಿದೆ” ಎಂದು ಅವರು ಬಾಹ್ಯಾಕಾಶ ಪರಿಸ್ಥಿತಿಯ ಜಾಗೃತಿ ಮತ್ತು ಬಾಹ್ಯಾಕಾಶ ಸಂಚಾರ ನಿರ್ವಹಣೆ ಕುರಿತು ಮೂರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,  ಗಗನಯಾನ ಹಾರಾಟದ ಪರೀಕ್ಷೆಯು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಬಹುದು ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top