News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿನಿಮಾ ರಂಗದ ಗಣ್ಯರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ ಯೋಗಿ

ಮುಂಬಯಿ: ಉತ್ತರ ಪ್ರದೇಶವನ್ನು ಚಲನಚಿತ್ರ ಸ್ನೇಹಿ ರಾಜ್ಯವೆಂದು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯತ್ನಪಡುತ್ತಿದ್ದಾರೆ.  ಗುರುವಾರ ಅವರು ಮುಂಬಯಿಯಲ್ಲಿ ಸಿನಿಮಾ ರಂಗದ ಗಣ್ಯರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.

ತಮ್ಮ ರಾಜ್ಯವನ್ನು ಚಲನಚಿತ್ರ ನಿರ್ಮಾಣದ ತಾಣವಾಗಿ ಅನ್ವೇಷಿಸಲು ಮನರಂಜನಾ ಉದ್ಯಮದ ಪ್ರಮುಖ ಸದಸ್ಯರನ್ನು ಯೋಗಿ ಆಹ್ವಾನಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬಾಲಿವುಡ್ ಸದಸ್ಯರೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿ, ”ನಿಮ್ಮ ಇಬ್ಬರು ಚಿತ್ರರಂಗದ ಸದಸ್ಯರನ್ನು ನಾವು ಸಂಸದರನ್ನಾಗಿ ಮಾಡಿದ್ದೇವೆ ಮತ್ತು ನೀವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದಕ್ಕೆ ಏನು ಮಾಡಬೇಕೆಂದು ನಮಗೆ ತಿಳಿದಿದೆ. ಸಮಾಜವನ್ನು ಒಗ್ಗೂಡಿಸುವಲ್ಲಿ ಮತ್ತು ದೇಶದ ಏಕತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಸಿನಿಮಾ ನಿರ್ಣಾಯಕ ಪಾತ್ರ ವಹಿಸುತ್ತದೆ” ಎಂದಿದ್ದಾರೆ.

ಮುಂದಿನ ತಿಂಗಳು ಲಕ್ನೋದಲ್ಲಿ ನಡೆಯಲಿರುವ ಹೂಡಿಕೆದಾರರ ಶೃಂಗಸಭೆಯನ್ನು ಉತ್ತೇಜಿಸಲು ಮುಂಬೈಗೆ ಭೇಟಿ ನೀಡಿರುವ ಆದಿತ್ಯನಾಥ್, ಉತ್ತರ ಪ್ರದೇಶವು ಚಲನಚಿತ್ರ ಸ್ನೇಹಿ ರಾಜ್ಯವಾಗಿ ಹೊರಹೊಮ್ಮಿದೆ ಮತ್ತು ಇದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಗುರುತಿಸಲ್ಪಟ್ಟಿದೆ ಎಂದು ಹೇಳಿದರು.

 ತಮ್ಮ ಸರ್ಕಾರದ ಚಲನಚಿತ್ರ ನೀತಿಯ ಅಡಿಯಲ್ಲಿ, ಯುಪಿಯಲ್ಲಿ ವೆಬ್ ಸರಣಿಯನ್ನು ಚಿತ್ರೀಕರಿಸಿದರೆ ಅದಕ್ಕೆ ಶೇಕಡಾ 50 ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ಹೇಳಿದರು. ಅಂತೆಯೇ, ಸ್ಟುಡಿಯೋಗಳು ಮತ್ತು ಫಿಲ್ಮ್ ಲ್ಯಾಬ್‌ಗಳನ್ನು ಸ್ಥಾಪಿಸಲು ಶೇಕಡಾ 25 ರಷ್ಟು ಸಹಾಯಧನ ನೀಡಲಾಗುತ್ತದೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ನಿರ್ಮಾಪಕ ಬೋನಿ ಕಪೂರ್, ಗೋರಖ್‌ಪುರ ಲೋಕಸಭಾ ಸಂಸದ ಹಾಗೂ ನಟ ರವಿ ಕಿಶನ್, ಭೋಜ್‌ಪುರಿ ನಟ ದಿನೇಶ್ ಲಾಲ್ ನಿರ್ಹುವಾ, ಹಿನ್ನೆಲೆ ಗಾಯಕರಾದ ಸೋನು ನಿಗಮ್, ಕೈಲಾಶ್ ಖೇರ್, ನಟ ಸುನೀಲ್ ಶೆಟ್ಟಿ, ಚಿತ್ರ ನಿರ್ಮಾಪಕರಾದ ಚಂದ್ರಪ್ರಕಾಶ್ ದ್ವಿವೇದಿ, ಮಧುರ್ ಭಂಡಾರ್ಕರ್ ಮತ್ತು ರಾಜಕುಮಾರ್ ಸಂತೋಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top