News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅರುಣಾಚಲದ ತೈವಾಂಗ್‌ನಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ರಾಜನಾಥ್‌ ಚಾಲನೆ

ತೈವಾಂಗ್:‌ ಡಿಸೆಂಬರ್ 9 ರಂದು ಚೀನಾ ಲಿಬರೇಶನ್‌ ಆರ್ಮಿ ಮತ್ತು ಭಾರತೀಯ ಸೇನೆಯ ನಡುವಿನ ಘರ್ಷಣೆಯ ನಂತರ ಮೊದಲ ಬಾರಿಗೆ  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅರುಣಾಚಲ ಪ್ರದೇಶದ ತೈವಾಂಗ್ ಜಿಲ್ಲೆಗೆ ಭೇಟಿ ನೀಡಿದ್ದಾರೆ.

ವಿವಿಧ ಮೂಲಭೂತ ಯೋಜನೆಗಳ ಉದ್ಘಾಟನೆಯ ನಂತರ ಮಾತನಾಡಿದ ಅವರು, “ಯುದ್ಧವನ್ನು ಭಾರತದ ಮೇಲೆ ಹೇರಲು ಹೊರಟರೆ ಅದು ಯಾವುದೇ ಸವಾಲನ್ನಾದರೂ ಎದುರಿಸಲು ಸಿದ್ಧವಾಗಿದೆ ಎಂದಿದ್ದಾರೆ.

ಇದು ಯುದ್ಧದ ಯುಗವಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಪುನರುಚ್ಛರಿಸಿದ ಅವರು,  ಯುದ್ಧದಲ್ಲಿ ನಮಗೆ ನಂಬಿಕೆ ಇಲ್ಲ. ಆದರೆ ಯುದ್ಧವನ್ನು ನಮ್ಮ ಮೇಲೆ ಹೇರಿದರೆ ನಾವು ಯಾವುದೇ ಸವಾಲನ್ನು ಎದುರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.

ಈಶಾನ್ಯದಲ್ಲಿ ಸಂಪರ್ಕ ಮತ್ತು ರಸ್ತೆ ಮೂಲಸೌಕರ್ಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಸಿಂಗ್, “ಸಾಕಷ್ಟು ಮೂಲಸೌಕರ್ಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಾವು ಈಗ ಉತ್ತರ ವಲಯದಲ್ಲಿ  ಪರಿಸ್ಥಿತಿಗಳು ಮತ್ತು ಎದುರಾಳಿಯನ್ನು ದೃಢವಾಗಿ ಎದುರಿಸಲು  ಶಕ್ತರಾಗಿದ್ದೇವೆ” ಎಂದಿದ್ದಾರೆ.

ಲಡಾಖ್ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸುವ BRO ಕಾರ್ಯವನ್ನು ಶ್ಲಾಘಿಸಿದ ಅವರು, “ ಡೆಮ್‌ಚೌಕ್ ಅಥವಾ ಡಿಎಸ್-ದೌಲತ್-ಬೇಗ್-ಓಲ್ಡಿ ಸೆಕ್ಟರ್ ಆಗಿರಲಿ, ಲಡಾಖ್‌ನಲ್ಲಿ ರಸ್ತೆಗಳ ಅಭಿವೃದ್ಧಿಯ ವೇಗವು ಅಭೂತಪೂರ್ವವಾಗಿದೆ. ಮೊದಲು ಡೆಮ್‌ಚೋಕ್‌ನಲ್ಲಿ, ಜನರು ಪಾಸ್ ದಾಟಲು ಕುದುರೆಗಳು ಮತ್ತು ಕತ್ತೆಗಳನ್ನು ಬಳಸಬೇಕಾಗಿತ್ತು. ಆದರೆ ಇಂದು ಯಾವುದೇ ವಾಹನದಲ್ಲಿ ಪ್ರಯಾಣಿಸಬಹುದಾಗಿದೆ” ಎಂದಿದ್ದಾರೆ.

ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರು ಸುಮಾರು 17,000 ಅಡಿ ಎತ್ತರದ ಭಾರತೀಯ ಶಿಖರದಲ್ಲಿ ಆಕ್ರಮಣ ಮಾಡಲು ಪ್ರಯತ್ನಿಸಿದ ನಂತರ ಅರುಣಾಚಲ ಪ್ರದೇಶದ ತೈವಾಂಗ್ ಸೆಕ್ಟರ್‌ನಲ್ಲಿ ಡಿಸೆಂಬರ್ 9 ರಂದು ಭಾರತೀಯ ಮತ್ತು ಚೀನಾದ ಸೈನಿಕರು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಉದ್ದಕ್ಕೂ ಘರ್ಷಣೆ ನಡೆಸಿದರು.

ಭಾರತ ಮತ್ತು ಚೀನಾ ತವಾಂಗ್‌ನಲ್ಲಿ ಘರ್ಷಣೆಯ ಹಿನ್ನೆಲೆಯಲ್ಲಿ 17 ನೇ ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆ ನಡೆಸಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top