News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿಸೆಂಬರ್‌ನಲ್ಲಿ 12.82 ಲಕ್ಷ ಕೋಟಿ ರೂ ಮೌಲ್ಯದ ವಹಿವಾಟು ನಡೆಸಿದೆ UPI

ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ಪಾವತಿಗಳು ಡಿಸೆಂಬರ್‌ನಲ್ಲಿ ಗರಿಷ್ಠ ದಾಖಲೆ 12.82 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದ್ದು, ಒಟ್ಟು 782 ಕೋಟಿ ವಹಿವಾಟುಗಳನ್ನು ಮಾಡಿದೆ.

”ದೇಶದಲ್ಲಿ ಡಿಜಿಟಲ್ ಪಾವತಿ ಕ್ರಾಂತಿಯನ್ನು ಉಂಟುಮಾಡುವಲ್ಲಿ UPI ಪ್ರಮುಖ ಕೊಡುಗೆ ನೀಡಿದೆ. ಡಿಸೆಂಬರ್ 2022 ರಲ್ಲಿ, ಯುಪಿಐ ರೂ 12.82 ಟ್ರಿಲಿಯನ್ ಮೌಲ್ಯದ 7.82 ಬಿಲಿಯನ್ ವಹಿವಾಟುಗಳನ್ನು ದಾಟಿದೆ,” ಎಂದು ಹಣಕಾಸು ಸೇವೆಗಳ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಯುಪಿಐ ಮೂಲಕ ಪಾವತಿಗಳು 12 ಲಕ್ಷ ಕೋಟಿ ರೂ ದಾಟಿತ್ತು. ನವೆಂಬರ್‌ನಲ್ಲಿ ಯುಪಿಐ ಮೂಲಕ 11.90 ಲಕ್ಷ ಕೋಟಿ ರೂ ಮೌಲ್ಯದ 730.9 ಕೋಟಿ ವಹಿವಾಟು ನಡೆದಿದೆ.

2022 ರ ಡಿಸೆಂಬರ್‌ನಲ್ಲಿ 782 ಕೋಟಿ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವಹಿವಾಟುಗಳನ್ನು ಮಾಡುವ ಮೂಲಕ ದೇಶದ ಡಿಜಿಟಲ್ ಪಾವತಿಗಳು ಹೊಸ ಮೈಲಿಗಲ್ಲು ಸಾಧಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.ಭಾರತೀಯರು ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ, ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಗಮನಾರ್ಹವಾದ ಆಸಕ್ತಿ ತೋರಿಸುತ್ತಿರುವುದಕ್ಕಾಗಿ ಶ್ಲಾಘಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top