ಮಂಡ್ಯ: ದೇಶದಾದ್ಯಂತ ಪಂಚಾಯತ್ ಮಟ್ಟದಲ್ಲಿ ಎರಡು ಲಕ್ಷ ಪ್ರಾಥಮಿಕ ಹಾಲಿನ ಡೈರಿಗಳನ್ನು ತೆರೆಯಲಾಗುವುದು ಎಂದು ಕೇಂದ್ರ ಗೃಹ ಅಮಿತ್ ಶಾ ಹೇಳಿದ್ದಾರೆ.
ಅವರು ಇಂದು ಮಂಡ್ಯದಲ್ಲಿ ಮೆಗಾ ಡೈರಿಯನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ಮತ್ತು ಭಾರತವನ್ನು ಪ್ರಮುಖ ಹಾಲು ಉತ್ಪಾದಕ ಮತ್ತು ರಫ್ತುದಾರರನ್ನಾಗಿ ಮಾಡಲು ಮೂರು ವರ್ಷಗಳಲ್ಲಿ ದೇಶಾದ್ಯಂತ ಪಂಚಾಯತ್ ಮಟ್ಟದಲ್ಲಿ ಎರಡು ಲಕ್ಷ ಪ್ರಾಥಮಿಕ ಹಾಲಿನ ಡೈರಿಗಳನ್ನು ತೆರೆಯಲಾಗುವುದು ಎಂದಿದ್ದಾರೆ.
ಹಾಲು ಉತ್ಪಾದಕರಿಗೆ ಸಹಕಾರಿ ಸಚಿವಾಲಯದಿಂದ ಎಲ್ಲಾ ತಾಂತ್ರಿಕ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.
ಕರ್ನಾಟಕದಲ್ಲಿ ಹಾಲಿನ ಸಹಕಾರಿ ಸಂಘಗಳ ಬೆಳವಣಿಗೆಯನ್ನು ಶ್ಲಾಘಿಸಿದ ಶಾ, ರಾಜ್ಯದಲ್ಲಿ 1975ರಲ್ಲಿ 66000 ಕಿಲೋಲೀಟರ್ ಇದ್ದ ಹಾಲಿನ ಸಂಸ್ಕರಣೆ ಈಗ ಪ್ರತಿದಿನ 82 ಲಕ್ಷ ಕಿಲೋಲೀಟರ್‌ಗೆ ಬೆಳೆದಿದೆ, ಹಾಲು ಒಕ್ಕೂಟದ ವಹಿವಾಟು 1975 ರಲ್ಲಿ ನಾಲ್ಕು ಕೋಟಿ ರೂಪಾಯಿಗಳಿಂದ ಈಗ 25000 ಕೋಟಿ ರೂಪಾಯಿಗಳಿಗೆ ಏರಿದೆ ಎಂದು ಹೇಳಿದರು.
80 ರಷ್ಟು ಆದಾಯವು ಹಾಲು ಉತ್ಪಾದಿಸುವ ರೈತರಿಗೆ ಹೋಗುತ್ತದೆ ಎಂದು ಅವರು, ಇಂದು ಕರ್ನಾಟಕವು 15,210 ಹಾಲು ಸಹಕಾರ ಸಂಘಗಳನ್ನು ಹೊಂದಿದ್ದು, ಅಲ್ಲಿ 26.22 ಲಕ್ಷ ರೈತರು ಹಾಲು ಸರಬರಾಜು ಮಾಡುತ್ತಾರೆ ಎಂದಿದ್ದಾರೆ.
ಕ್ಷೀರ ಭಾಗ್ಯ ಯೋಜನೆಯಡಿ ಅಂಗನವಾಡಿಗಳಲ್ಲಿ 65 ಲಕ್ಷ ಲೀಟರ್ ಹಾಲನ್ನು ವಿತರಿಸಲಾಗುತ್ತಿದ್ದು, ರಾಜ್ಯದಲ್ಲಿ ಪ್ರತಿ ಮಗುವಿಗೆ ಪ್ರತಿದಿನ 150 ಮಿಲಿ ಹಾಲು ಕುಡಿಸಲಾಗುತ್ತಿದೆ. ಗುಜರಾತ್‌ನ ಅಮುಲ್ ಮತ್ತು ಕರ್ನಾಟಕದ ನಂದಿನಿ ಎರಡೂ ದೇಶದ ಹಾಲು ಉತ್ಪಾದಕ ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಕೈಜೋಡಿಸಬಹುದು ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.