ಜೆರುಸಲೇಮ್: ಬೆಂಜಮಿನ್ ನೆತನ್ಯಾಹು ಅವರು ಮತ್ತೆ ಇಸ್ರೇಲ್ನ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಎದುರುನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬೆಂಜಮಿನ್ ನೆತನ್ಯಾಹು ಗುರುವಾರ ಇಸ್ರೇಲ್ನ ಪ್ರಧಾನ ಮಂತ್ರಿಯಾಗಿ ಆರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು, ಅವರು ಯಹೂದಿ ರಾಷ್ಟ್ರದ ಕಟ್ಟರ್ ಬಲಪಂಥೀಯ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಇಸ್ರೇಲ್ನ ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿರುವ ನೆತನ್ಯಾಹು ಅವರು 120 ಸದಸ್ಯರ ನೆಸೆಟ್ನಲ್ಲಿ (ಇಸ್ರೇಲಿ ಸಂಸತ್ತು) 63 ಶಾಸಕರ ಬೆಂಬಲವನ್ನು ಹೊಂದಿದ್ದಾರೆ.
ಅವರ ಮಿತ್ರಪಕ್ಷಗಳಲ್ಲಿ ರಿಲೀಜಿಯಸ್ ಜಿಯೋನಿಸಂ ಮತ್ತು ಜ್ಯುವಿಶ್ ಪವರ್ ಪಾರ್ಟಿಗಳು ಸೇರಿವೆ, ಇದು ಪ್ಯಾಲೇಸ್ತೇನ್ಗೆ ರಾಷ್ಟ್ರದ ಸ್ಥಾನಮಾನವನ್ನು ವಿರೋಧಿಸುವ ಪಕ್ಷಗಳಾಗಿವೆ.
ಇರಾನ್ನ ಪರಮಾಣು ಕಾರ್ಯಕ್ರಮವನ್ನು ತಡೆಯುವುದು ಮತ್ತು ಇಸ್ರೇಲ್ನ ಮಿಲಿಟರಿ ಸಾಮರ್ಥ್ಯವನ್ನು ನಿರ್ಮಿಸುವುದರ ಜೊತೆಗೆ ಇಸ್ರೇಲಿ-ಅರಬ್ ಸಂಘರ್ಷವನ್ನು ಕೊನೆಗೊಳಿಸುವುದು ತನ್ನ ಪ್ರಮುಖ ಆದ್ಯತೆಯಾಗಿದೆ ಎಂದು ನೆತನ್ಯಾಹು ಸಂಸತ್ತಿಗೆ ತಿಳಿಸಿದ್ದಾರೆ.
🇮🇱🇮🇱🇮🇱 pic.twitter.com/woeI4sOxBk
— Benjamin Netanyahu – בנימין נתניהו (@netanyahu) December 29, 2022
Heartiest congratulations @netanyahu for forming the government. Looking forward to working together to strengthen our strategic partnership.
— Narendra Modi (@narendramodi) December 29, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.