News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತೈವಾನ್‌ ಸಮೀಪ 71 ಯುದ್ಧವಿಮಾನಗಳನ್ನು ಕಳುಹಿಸಿದ ಚೀನಾ

ತೈಪೆ: ಚೀನಾವು ತೈವಾನ್‌ ಸುತ್ತ ಅಪಾರ ಪ್ರಮಾಣ ಯುದ್ಧ ಉಪಕರಣಗಳನ್ನು ನಿಯೋಜಿಸಿ ತಾಲೀಮು ನಡೆಸುತ್ತಿದೆ ಎಂದು ವರದಿಗಳು ತಿಳಿಸಿದೆ.

ವರದಿಗಳ ಪ್ರಕಾರ, ತನ್ನ ಮಿಲಿಟರಿ ಶಕ್ತಿಯ ಅತಿದೊಡ್ಡ ಪ್ರದರ್ಶನದ ಭಾಗವಾಗಿ 71 ಯುದ್ಧವಿಮಾನಗಳನ್ನು ಬಳಸಿ ಚೀನಾ ತೈವಾನ್‌‌ ಸಮೀಪ ತಾಲೀಮು ನಡೆಸುತ್ತಿದೆ. ಹಡಗುಗಳು ಮತ್ತು ಫೈಟರ್‌ ಜೆಟ್‌ಗಳು ಕೂಡ ತಾಲೀಮಿನಲ್ಲಿ ಸೇರಿಕೊಂಡಿವೆ.

ಚೀನಿ ಮಿಲಿಟರಿ ವಿಮಾನಗಳು ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ದಾಟಿದೆ ಮತ್ತು ಇಂದು ಬೆಳಿಗ್ಗೆ 6 ಗಂಟೆಯವರೆಗೆ 24 ಗಂಟೆಗಳ ಅವಧಿಯಲ್ಲಿ ತೈವಾನ್‌ನ ನೈಋತ್ಯ ವಾಯು ರಕ್ಷಣಾ ಗುರುತಿನ ವಲಯವನ್ನು ಪ್ರವೇಶಿಸಿದೆ. ಚೀನಾವು ಏಳು ನೌಕಾ ಹಡಗುಗಳನ್ನು ತೈವಾನ್ ದ್ವೀಪದ ಬಳಿ ಕಳುಹಿಸಿದೆ ಎಂದು ವರದಿ ಹೇಳಿದೆ.

ಆಗಸ್ಟ್‌ನಲ್ಲಿ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಭೇಟಿ ನೀಡಿದ ನಂತರ ಚೀನಾ ತೈವಾನ್ ಅನ್ನು ಗುರಿಯಾಗಿಸಿ ಹಲವು ಯುದ್ಧ ಸನ್ನದ್ಧತಾ ಕಾರ್ಯಾಚರಣೆಗಳನ್ನು ನಡೆಸುತ್ತಲೇ ಬರುತ್ತಿದೆ. ಚೀನಾ ತೈವಾನ್‌ ಅನ್ನು ತನ್ನ ಭೂಪ್ರದೇಶ ಎಂದು ಹೇಳುತ್ತಲೇ ಬರುತ್ತಿದೆ. ಹೀಗಾಗಿ ಅದರ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top