News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೈನಂದಿನ ಕೋವಿಡ್‌ ಅಂಕಿಅಂಶ ಪ್ರಕಟಗೊಳಿಸುವುದನ್ನು ನಿಲ್ಲಿಸಿದ ಚೀನಾ

ನವದೆಹಲಿ: ಭಾರೀ ಪ್ರಮಾಣದಲ್ಲಿ ಕೋವಿಡ್‌-19 ಸಾಂಕ್ರಾಮಿಕದ ಅಲೆಗೆ ತುತ್ತಾಗಿರುವ ಚೀನಾ ಇದೀಗ ದೈನಂದಿನ ಕೋವಿಡ್‌ ಅಂಕಿಅಂಶಗಳ ವರದಿಯನ್ನು ಪ್ರಕಟಗೊಳಿಸುವುದನ್ನು ಸ್ಥಗಿತಗೊಳಿಸಿದೆ.

ಈ ತಿಂಗಳ ಆರಂಭದಲ್ಲಿ ಕೇವಲ 20 ದಿನಗಳಲ್ಲಿ 25 ಕೋಟಿ ಹೊಸ ಪ್ರಕರಣಗಳು ಚೀನಾದಲ್ಲಿ ಸಂಭವಿಸಿದೆ ಎಂಬ ಮಾಹಿತಿ ಸೋರಿಕೆಯಾದ ಬಳಿಕ ಚೀನಾ ದೈನಂದಿನ ಕೋವಿಡ್ ಡೇಟಾವನ್ನು ಪ್ರಕಟಿಸುವುದನ್ನು ನಿಲ್ಲಿಸಿದೆ.

ಸೋರಿಕೆಯಾದ ದಾಖಲೆಯು ಡಿಸೆಂಬರ್ 1 ರಿಂದ 20 ರವರೆಗೆ 24.8 ಕೋಟಿ ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ, ಅಥವಾ ಚೀನಾದ ಜನಸಂಖ್ಯೆಯ ಶೇಕಡಾ 17.65 ರಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸಿದೆ.

ಕೋವಿಡ್ ಪ್ರಕರಣಗಳ ಭಾರೀ ಏರಿಕೆಯ ನಡುವೆ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ದೈನಂದಿನ ಕೋವಿಡ್ ಡೇಟಾವನ್ನು ಪ್ರಕಟಿಸದಿರಲು ನಿರ್ಧರಿಸಿದೆ.

2023 ರಲ್ಲಿ 20 ಲಕ್ಷ ಕೋವಿಡ್ ಸಾವುಗಳು ಚೀನಾದಲ್ಲಿ ಸಂಭವಿಸಬಹುದು ಎಂದು ತಜ್ಞರು ಮುನ್ಸೂಚಿಸಿದೆ. ಈಗಾಗಲೇ ಅಲ್ಲಿ ಕೋವಿಡ್ ಪ್ರಕರಣಗಳು ವ್ಯಾಪಿಸುತ್ತಿದ್ದು, ಚೀನಾದ ಆಸ್ಪತ್ರೆಗಳು ಮತ್ತು ಶವಾಗಾರಗಳು ಸಂಪೂರ್ಣವಾಗಿ ತುಂಬಿವೆ. ತುಂಬಿದ ಐಸಿಯುಗಳು ಮತ್ತು ಕಿಕ್ಕಿರಿದ ಸ್ಮಶಾನಗಳ ನಡುವೆ ಕೋವಿಡ್ -19 ಪ್ರಕರಣಗಳಲ್ಲಿ ಭಾರಿ ಉಲ್ಬಣವನ್ನು ನಿರ್ವಹಿಸಲು ಚೀನಾ ಕಷ್ಟಪಡುತ್ತಿದೆ ಎನ್ನಲಾಗಿದೆ.

ದೊಡ್ಡ ನಗರಗಳಲ್ಲಿ ಹರಡುತ್ತಿರುವ ಸೋಂಕುಗಳ ಸುನಾಮಿಯಿಂದ ಚೀನಾ ದೇಶವು ಹೊರಬರಲು ಒಂದೆರಡು ತಿಂಗಳು ತೆಗೆದುಕೊಳ್ಳಬಹುದು ಎಂದು ವರದಿಗಳು ಸೂಚಿಸುತ್ತವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top