News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಫ್ಘಾನ್: NGOಗಳಲ್ಲಿ ಮಹಿಳಾ ಉದ್ಯೋಗಿಗಳನ್ನು ನಿಷೇಧಿಸಿದ ತಾಲಿಬಾನ್

ನವದೆಹಲಿ: ಅಫ್ಘಾನಿಸ್ತಾನದ ಮಹಿಳೆಯರು ತಮ್ಮ ಶಿಕ್ಷಣ ಹಕ್ಕುಗಳನ್ನು ಕಳೆದುಕೊಂಡ ನಂತರ ಇದೀಗ ಎನ್‌ಜಿಓಗಳಲ್ಲಿ ಕೆಲಸ ಮಾಡುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ತಾಲಿಬಾನ್‌ ಆಡಳಿತದ ಕಟ್ಟರ್‌ ಮೂಲಭೂತವಾದಿ ಮನಸ್ಥಿತಿಯೇ ಕಾರಣವಾಗಿದೆ.

ತಾಲಿಬಾನ್‌ ನಡೆ ಅಲ್ಲಿನ ಮಹಿಳೆಯರನ್ನು ಆಕ್ರೋಶಕ್ಕೀಡು ಮಾಡಿದೆ. ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಕೆಲಸ ಮಾಡದಂತೆ ನಿರ್ಬಂಧಿಸಿದ ಕಾರಣ ಅಫ್ಘಾನಿಸ್ತಾನದ ತಾಲಿಬಾನ್ ನೇತೃತ್ವದ ಸರ್ಕಾರದ ವಿರುದ್ಧ ಮಹಿಳೆಯರು ಬೃಹತ್ ಪ್ರತಿಭಟನೆಯನ್ನು ನಡೆಸಿದ್ದಾರೆ.

ನಿಷೇಧದ ನಂತರ, ಮಹಿಳಾ ಪ್ರತಿಭಟನಾಕಾರರು ಹೆರಾತ್ ನಗರದ ಬೀದಿಗಿಳಿದು ಸರ್ಕಾರದ ತಾರತಮ್ಯದ ಆಡಳಿತದ ವಿರುದ್ಧ ಧ್ವನಿ ಎತ್ತಿದರು. ಮಹಿಳೆಯರು ಬುರ್ಖಾ ಧರಿಸಿ ಘೋಷಣಾ ಫಲಕಗಳನ್ನು ಹಿಡಿದು, “ಶಿಕ್ಷಣ ನಮ್ಮ ಮಾನವ ಹಕ್ಕು” ಎಂಬ ಘೋಷಣೆಗಳನ್ನು ಕೂಗಿದರು.

ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುವುದಾಗಿ ಆರಂಭದಲ್ಲಿ ತಾಲಿಬಾನ್ ಭರವಸೆ ನೀಡಿತ್ತು. ಆದರೀಗ ಅದು ತನ್ನ ಅಸಲಿ ಮುಖವನ್ನು ತೋರಿಸುತ್ತಿದೆ. ತಾಲಿಬಾನ್ ಇಸ್ಲಾಮಿಕ್ ಕಾನೂನು ಅಥವಾ ಷರಿಯಾದ ಅವರ ಕಟ್ಟುನಿಟ್ಟಾದ ನಿಯಮವನ್ನು ವ್ಯಾಪಕವಾಗಿ ಜಾರಿಗೆ ತರಲಾಗುತ್ತಿದೆ.

ತಾಲಿಬಾನ್ ಆಡಳಿತವು ಮಧ್ಯಮ ಶಾಲೆ ಮತ್ತು ಪ್ರೌಢಶಾಲೆಯಿಂದ ಹುಡುಗಿಯರನ್ನು ನಿಷೇಧಿಸಿದೆ, ಹಲವು ಉದ್ಯೋಗದಿಂದ ಮಹಿಳೆಯರನ್ನು ನಿರ್ಬಂಧಿಸಿದೆ ಮತ್ತು ಸಾರ್ವಜನಿಕವಾಗಿ ತಲೆಯಿಂದ ಕಾಲಿನ ಬೆರಳವರೆಗೆ ಬಟ್ಟೆಗಳನ್ನು ಧರಿಸಲು ಆದೇಶಿಸಿದೆ. ಪಾರ್ಕ್‌ಗಳು ಮತ್ತು ಜಿಮ್‌ಗಳಿಂದ ಮಹಿಳೆಯರನ್ನು ಸಹ ನಿಷೇಧಿಸಲಾಗಿದೆ. ಇಂತಹ ತಾರತಮ್ಯದ ಧೋರಣೆ ಅಲ್ಲಿನ ಮಹಿಳೆಯರನ್ನು ಭ್ರಮನಿರಸನಗೊಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top