ನವದೆಹಲಿ: ಭಾರತದಲ್ಲಿ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅನುಮತಿಸದಿದ್ದಕ್ಕಾಗಿ ಪರೀಕ್ಷಾ ಹಾಲ್ಗಳಿಂದ ಹೊರನಡೆಯುತ್ತಿರು ಬೆಳವಣಿಗೆ ಮುಂದುವರೆಸುತ್ತಿದೆ. ಆದರೆ ಸಂಪ್ರದಾಯಸ್ಥ ಇಸ್ಲಾಮಿಕ್ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲಿ ಪರೀಕ್ಷಾ ಹಾಲ್ಗಳಲ್ಲಿ ಹಿಜಾಬ್ ಮಾದರಿಯ ಅಬಯಾವನ್ನು ನಿಷೇಧಿಸಲಾಗಿದೆ.
ಅಬಯಾ ಸೌದಿ ಮಹಿಳೆಯರು ಉಡುಪಿನ ಮೇಲೆ ಧರಿಸುವ ಸಡಿಲವಾದ ಮೇಲಂಗಿಯಾಗಿದೆ ಮತ್ತು ಭಾರತ, ಪಾಕಿಸ್ಥಾನ ಮತ್ತು ಬಾಂಗ್ಲಾದಲ್ಲಿ ಮುಸ್ಲಿಮರು ಸಾಮಾನ್ಯವಾಗಿ ಧರಿಸುವ
ಬುರ್ಖಾದಂತೆಯೇ ಕೂದಲು, ಭುಜಗಳು ಮತ್ತು ಕುತ್ತಿಗೆ ಮತ್ತು ಬಾಯಿಯನ್ನು ಮುಚ್ಚುವ ಸ್ಕಾರ್ಫ್ನಂತೆ ಇರುತ್ತದೆ.
ಸೌದಿ ಮತ್ತು ಇತರ ಕೆಲವು ಇಸ್ಲಾಮಿಕ್ ದೇಶಗಳಲ್ಲಿ ಈ ಮೇಲಂಗಿಯು ಕಾನೂನಿನ ಪ್ರಕಾರ ಸಾರ್ವಜನಿಕವಾಗಿ ಮಹಿಳೆಯರಿಗೆ ಕಡ್ಡಾಯವಾದ ಬಟ್ಟೆಯಾಗಿದೆ.
2018 ರಲ್ಲಿ, ಸೌದಿಯ ಯುವ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಸಾರ್ವಜನಿಕವಾಗಿ ಮಹಿಳೆಯರು ಧರಿಸುವ ಉಡುಗೆ ಸಭ್ಯ ಮತ್ತು ಗೌರವಾನ್ವಿತ ಆಗಿರುವವರೆಗೆ, ಅಬಯಾ ಕಡ್ಡಾಯವಲ್ಲ ಎಂದು ಹೇಳಿ ಅಂತರರಾಷ್ಟ್ರೀಯ ಗಮನ ಸೆಳೆದರು.
ಅಬುಧಾಬಿಯಿಂದ ಪ್ರಕಟವಾಗುವ ಆಂಗ್ಲ ಭಾಷೆಯ ದಿನಪತ್ರಿಕೆಯ ದಿ ನ್ಯಾಷನಲ್ನ ವರದಿಯ ಪ್ರಕಾರ, ಸೌದಿ ಶಿಕ್ಷಣ ಮತ್ತು ತರಬೇತಿ ಮೌಲ್ಯಮಾಪನ ಆಯೋಗವು ಇತ್ತೀಚಿಗೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಹಾಲ್ಗಳಲ್ಲಿ ಅಬಯಾವನ್ನು ಧರಿಸಲು ಅನುಮತಿಸುವುದಿಲ್ಲ ಎಂದು ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.