News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚೀನಾ ಗಡಿಯಲ್ಲಿ ಝೋರಾವರ್ ಲೈಟ್ ಟ್ಯಾಂಕ್‌ಗಳ ನಿಯೋಜನೆಗೆ ಭಾರತ ಚಿಂತನೆ

ನವದೆಹಲಿ: ಸೇನೆಗೆ ಉತ್ತೇಜನ ನೀಡುವ ಸಲುವಾಗಿ ಭಾರತವು ಚೀನಾದ ಗಡಿಯಲ್ಲಿ ಝೋರಾವರ್ ಲೈಟ್ ಟ್ಯಾಂಕ್‌ಗಳನ್ನು ನಿಯೋಜಿಸಲು ಚಿಂತನೆ ನಡೆಸಿದೆ. ಅಲ್ಲದೇ ರಸ್ತೆ ಮೂಲಸೌಕರ್ಯವನ್ನು ಹೆಚ್ಚಿಸುತ್ತ ಗಮನ ಹರಿಸಿದೆ ಎಂದು ವರದಿಗಳು ತಿಳಿಸಿವೆ.

ಮೊದಲು ಗಾಲ್ವಾನ್ ಮತ್ತು ಈಗ ಇತ್ತೀಚೆಗೆ ಸಂಭವಿಸಿದ ತವಾಂಗ್ ಘರ್ಷಣೆಗಳು ಚೀನಾ ಜೊತೆಗಿನ ಗಡಿಯಲ್ಲಿ ಮೂಲಸೌಕರ್ಯ ಮತ್ತು ಸೇನೆಯ ಸಾಮರ್ಥ್ಯಗಳನ್ನು ಹೆಚ್ಚಿಸುವ ಅಗತ್ಯತೆಯ ಮೇಲೆ ಬೆಳಕು ಚೆಲ್ಲಿವೆ. ವರದಿಯ ಪ್ರಕಾರ, ರಕ್ಷಣಾ ಸಚಿವಾಲಯವು ಈ ವಾರದ ಕೊನೆಯಲ್ಲಿ ನಡೆಯಲಿರುವ ಸಭೆಯಲ್ಲಿ ಚೀನಾ ಗಡಿಯಲ್ಲಿ ನಿಯೋಜಿಸಲು ಲಘು ಟ್ಯಾಂಕ್‌ಗಳ ಅಭಿವೃದ್ಧಿಗೆ ಸೇನೆಯಿಂದ ಪ್ರಸ್ತಾವನೆ ತೆಗೆದುಕೊಳ್ಳಲು ಮುಂದಾಗಿದೆ.

ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸುಮಾರು 354 ಟ್ಯಾಂಕ್‌ಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಭಾರತೀಯ ಸೇನೆಯು ತನ್ನ ಭವಿಷ್ಯದ ಲೈಟ್ ಟ್ಯಾಂಕ್‌ಗೆ ‘ಜೋರಾವರ್’ ಎಂದು ಹೆಸರಿಸಿದ್ದು, ಇದು ಈಗ ಚೀನಾದ ಸೇನೆಯಿಂದ ನಿಯಂತ್ರಿಸಲ್ಪಡುತ್ತಿರುವ ಟಿಬೆಟ್‌ನಲ್ಲಿ ಅನೇಕ ಯಶಸ್ವಿ ವಿಜಯಗಳನ್ನು ಮುನ್ನಡೆಸಿದ ಜನರಲ್ ಅವರ ಹೆಸರಾಗಿದೆ. ಮಧ್ಯಮ ಯುದ್ಧ ಟ್ಯಾಂಕ್‌ಗಳು ಎದುರಿಸುತ್ತಿರುವ ಮಿತಿಗಳನ್ನು ನಿವಾರಿಸಲು ಮತ್ತು ಬಯಲು, ಅರೆ ಮರುಭೂಮಿ ಮತ್ತು ಮರುಭೂಮಿಗಳಲ್ಲಿ ಎತ್ತರದ ಪ್ರದೇಶ , ಕನಿಷ್ಠ ಭೂಪ್ರದೇಶ ಮತ್ತು ದ್ವೀಪ ಪ್ರದೇಶಗಳಲ್ಲಿ ಎಲ್ಲಾ ಅನಿಶ್ಚಯತೆಗಳಲ್ಲೂ ಭಾರತೀಯ ಸೇನೆಯನ್ನು ಸಜ್ಜುಗೊಳಿಸಲು ಝೋರಾವರ್ ಮುಖ್ಯವಾಗಿದೆ.

ಈ ಟ್ಯಾಂಕ್‌ಗಳನ್ನು ಪ್ರಾಥಮಿಕವಾಗಿ ಬಯಲು ಮತ್ತು ಮರುಭೂಮಿ ಭೂಪ್ರದೇಶದಲ್ಲಿ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲಾಗಿದೆ.

ಮತ್ತೊಂದೆಡೆ, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಗಡಿ ಪ್ರದೇಶಗಳಲ್ಲಿ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಮತ್ತು ಅರುಣಾಚಲ ಪ್ರದೇಶದ ಎಲ್ಲಾ ಗಡಿ ಗ್ರಾಮಗಳನ್ನು ಉತ್ತಮ ಸಂಪರ್ಕ ರಸ್ತೆಗಳೊಂದಿಗೆ ಸಂಪರ್ಕಿಸಲು ಸರ್ಕಾರ ಯೋಜಿಸಿದೆ.

ರಸ್ತೆ ಸಂಪರ್ಕದ ಹೊರತಾಗಿ, ಅರುಣಾಚಲ ಪ್ರದೇಶದ ತವಾಂಗ್ ಮತ್ತು ಪಶ್ಚಿಮ ಕಮೆಂಗ್ ಜಿಲ್ಲೆಗಳಲ್ಲಿ ಎರಡು ಪ್ರಮುಖ ಸುರಂಗಗಳ ನಿರ್ಮಾಣ ಕಾರ್ಯಗಳಲ್ಲಿ BRO ತೊಡಗಿಸಿಕೊಂಡಿದೆ, ಇದು ಅಂತರರಾಷ್ಟ್ರೀಯ ಗಡಿಯ ಕಡೆಗೆ ಭದ್ರತಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಭದ್ರತಾ ಪಡೆಗಳಿಗೆ ಹೆಚ್ಚಿನ ಬಲ ತುಂಬಲಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top