News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಯುಷ್ಮಾನ್‌ ಭಾರತ್‌ಗೆ ಒಳಪಟ್ಟಿದೆ 22,000 ಆಸ್ಪತ್ರೆಗಳು: ಕೇಂದ್ರ

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ 1,500 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳನ್ನು ಒಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ಹೇಳಿದ್ದಾರೆ.

ಈ ಯೋಜನೆಯಡಿ ಇದುವರೆಗೆ 22,000 ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳನ್ನು ಎಂಪನೆಲ್ ಮಾಡಲಾಗಿದೆ ಎಂದಿದ್ದಾರೆ.

ಈ ಯೋಜನೆಯನ್ನು ಪ್ರತಿ ತಿಂಗಳು ಪರಿಶೀಲಿಸಲಾಗುತ್ತದೆ ಎಂದ ಸಚಿವರು, ಯೋಜನೆಯಡಿಯಲ್ಲಿ ರೋಗಿಗಳ ಖರ್ಚು ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾಂಡವಿಯಾ ಅವರು, 2018 ರಲ್ಲಿ ಪ್ರಾರಂಭವಾದ ಯೋಜನೆಯಡಿಯಲ್ಲಿ ಸರ್ಕಾರವು 10 ಕೋಟಿ ಕುಟುಂಬಗಳಿಗೆ ಅಥವಾ ಭಾರತದ 50 ಕೋಟಿ ಜನರಿಗೆ ಆರೋಗ್ಯ ಭದ್ರತೆಯನ್ನು ಒದಗಿಸುತ್ತಿದೆ ಎಂದಿದ್ದಾರೆ.

ಇಂದು ಈ ಯೋಜನೆಯಡಿ 4.5 ಕೋಟಿ ಬಡವರನ್ನು ಒಳಪಡಿಸಲಾಗಿದೆ ಎಂದು ಸಚಿವರು ಹೇಳಿದರು.

ಪ್ರತಿದಿನ ಏಳು-ಎಂಟು ಲಕ್ಷ ಫಲಾನುಭವಿ ಕಾರ್ಡ್‌ಗಳನ್ನು ಮುದ್ರಿಸಲಾಗುತ್ತದೆ ಮತ್ತು ಮುಂದಿನ ನಾಲ್ಕು-ಆರು ತಿಂಗಳಲ್ಲಿ 50 ಕೋಟಿ ಕಾರ್ಡ್‌ಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಸಚಿವಾಲಯವು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

“ಬಡವರು ಮತ್ತು ನಿರ್ಗತಿಕರು ಆಯುಷ್ಮಾನ್ ಭಾರತ್ ಯೋಜನೆಯಡಿ ಒಳಪಡುತ್ತಾರೆ ಮತ್ತು ಅವರು ರೂ 5 ಲಕ್ಷ ಆರೋಗ್ಯ ಭದ್ರತೆಯನ್ನು ಪಡೆಯಬಹುದು. ಯಾವುದೇ ಆಸ್ಪತ್ರೆಯು ಈ ಯೋಜನೆಯಡಿಯಲ್ಲಿ ಎಂಪನೆಲ್ ಮಾಡಬಹುದು. ಕಳೆದ ಒಂದು ವರ್ಷದಲ್ಲಿ, 1,500 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳನ್ನು ಯೋಜನೆಯ ಅಡಿಯಲ್ಲಿ ಎಂಪನೇಲ್ ಮಾಡಲಾಗಿದೆ” ಎಂದಿದ್ದಾರೆ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top