News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ವಿಟ್ಜರ್ಲೆಂಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ʼದಿ ಕಾಶ್ಮೀರಿ ಫೈಲ್ಸ್‌ʼ ಆಯ್ಕೆ

ನವದೆಹಲಿ: ಚಿತ್ರನಿರ್ಮಾಪಕ ವಿವೇಕ್ ಅಗ್ನಿಹೋತ್ರಿಯವರ ಬಾಕ್ಸ್ ಆಫೀಸ್ ಬ್ಲಾಕ್‌ಬಸ್ಟರ್ ‘ದಿ ಕಾಶ್ಮೀರ್ ಫೈಲ್ಸ್’ ಮಹತ್ವದ ಮೈಲುಗಲ್ಲುಗಳನ್ನು ಸಾಧಿಸುತ್ತಿದೆ.

ಚಿತ್ರಕ್ಕೆ ಒಂದು ವರ್ಷ ಪೂರ್ಣವಾಗುತ್ತಿದ್ದರೂ, ಅದು ಇನ್ನೂ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಹಲವಾರು ಜಾಗತಿಕ ನಾಮನಿರ್ದೇಶನಗಳ ಮೂಲಕ ದೇಶವನ್ನು ಹೆಮ್ಮೆಪಡಿಸುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ ಪ್ರತಿಷ್ಠಿತ ಸ್ವಿಟ್ಜರ್ಲೆಂಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ‘ಅಧಿಕೃತ ಆಯ್ಕೆ’ ವಿಭಾಗದಲ್ಲಿ ಆಯ್ಕೆಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವಿವೇಕ್ ರಂಜನ್ ಅಗ್ನಿಹೋತ್ರಿ ಈ ವಿಷಯ‌ ತಿಳಿಸಿದ್ದು, “ಪ್ರತಿಷ್ಠಿತ ಸ್ವಿಟ್ಜರ್ಲೆಂಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ‘ಅಧಿಕೃತ ಆಯ್ಕೆ’ ವಿಭಾಗದಲ್ಲಿ ದಿ ಕಾಶ್ಮೀರಿ ಫೈಲ್ಸ್ ಆಯ್ಕೆಯಾಗಿದೆ ಎಂದು ತಿಳಿಸಲು ಸಂತೋಷವಾಗಿದೆ” ಎಂದಿದ್ದಾರೆ.

ಕಾಶ್ಮೀರ ಫೈಲ್ಸ್ 1990 ರಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯದ ನೋವು, ಸಂಕಟ ಮತ್ತು ಹೋರಾಟವನ್ನು ಸೆರೆಹಿಡಿಯುವ ಹೃದಯ ವಿದ್ರಾವಕ ಕಥೆಯುಳ್ಳ ಸಿನಿಮಾ. ಚಲನಚಿತ್ರವು ವಿಶ್ವಾದ್ಯಂತ 340.92 ಕೋಟಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ ಮತ್ತು ನಿಸ್ಸಂದೇಹವಾಗಿ, ಈ ಚಲನಚಿತ್ರವು ಈ ವರ್ಷದ ಅತ್ಯಂತ ದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top