News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜ.5ರಿಂದ ಮನೋಹರ್ ಪರಿಕ್ಕರ್ ವಿಮಾನನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಹಾರಾಟ

ನವದೆಹಲಿ: ಗೋವಾದಲ್ಲಿ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಅವರ ಹೆಸರಿನ ಮೊಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು.

 ರಾಜಧಾನಿ ಪಣಜಿಯಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಹೊಸ ವಿಮಾನ ನಿಲ್ದಾಣವು ವಾರ್ಷಿಕ 44 ಲಕ್ಷ ಪ್ರಯಾಣಿಕರನ್ನು ನಿಭಾಯಿಸಬಲ್ಲದು. ಭವಿಷ್ಯದಲ್ಲಿ ವಿಸ್ತರಣೆ ಯೋಜನೆಗಳ ನಂತರ ಇದರ ಸಾಮರ್ಥ್ಯವನ್ನು ವರ್ಷಕ್ಕೆ 3 ಕೋಟಿ ಪ್ರಯಾಣಿಕರಿಗೆ ಹೆಚ್ಚಿಸಬಹುದಾಗಿದೆ.

ಹೊಸ ವಿಮಾನ ನಿಲ್ದಾಣವು ಏರ್‌ಬಸ್ A380 ನಂತಹ ದೊಡ್ಡ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಕ್ಷಿಪ್ರ ನಿರ್ಗಮನ ಟ್ಯಾಕ್ಸಿವೇಗಳನ್ನು ಮತ್ತು ತ್ವರಿತ ವಿಮಾನ ಚಲನೆಗಾಗಿ ಆರು ಅಡ್ಡ ಟ್ಯಾಕ್ಸಿವೇಗಳನ್ನು ಹೊಂದಿದೆ.

ಉತ್ತರ ಗೋವಾದ ಮೋಪಾ ಗ್ರಾಮದ ಬಳಿ ಇರುವ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2,870 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೊಸ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳು ಜನವರಿ 5 ರಿಂದ ಪ್ರಾರಂಭವಾಗಲಿವೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಹೊಸ ವಿಮಾನ ನಿಲ್ದಾಣವು ಗೋವಾದಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸುತ್ತದೆ.

ಒಂದು ವಿಮಾನ ನಿಲ್ದಾಣ ಸಾಕಾಗುವುದಿಲ್ಲವಾದ್ದರಿಂದ ಗೋವಾಕ್ಕೆ ಎರಡನೇ ವಿಮಾನ ನಿಲ್ದಾಣ ಬೇಕು ಎಂಬುದು ಹಳೆಯ ಬೇಡಿಕೆಯಾಗಿತ್ತು ಎಂದು ಮೋದಿ ಹೇಳಿದರು. ಗೋವಾದಲ್ಲಿ ಎರಡು ವಿಮಾನ ನಿಲ್ದಾಣಗಳಿದ್ದರೆ, ರಾಜ್ಯವು ಕಾರ್ಗೋ ಹಬ್ ಆಗಿ ಬದಲಾಗಲಿದೆ ಎಂದು ಅವರು ಹೇಳಿದರು.

ಹಿಂದಿನ ಕೇಂದ್ರ ಸರ್ಕಾರಗಳು ವಿಮಾನ ಸಂಪರ್ಕದಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದವು ಎಂದು ಪ್ರಧಾನಿ ಆರೋಪಿಸಿದರು. 2014ರ ಮೊದಲು ಭಾರತದಲ್ಲಿ ವಿಮಾನ ಪ್ರಯಾಣವು ಐಷಾರಾಮಿಯಾಗಿತ್ತು. ಸಾಮಾನ್ಯ ವರ್ಗದ ರೈಲು ಪ್ರಯಾಣಿಕರು ಕೂಡ ವಿಮಾನದಲ್ಲಿ ಪ್ರಯಾಣಿಸಲು ಬಯಸುತ್ತಾರೆ ಎಂದು ಹಿಂದಿನ ಸರ್ಕಾರಗಳು ಭಾವಿಸಿರಲಿಲ್ಲ ಎಂದು ಮೋದಿ ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top