News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಂಗ್ಲಾ ಭೇಟಿಯಲ್ಲಿವೆ ಭಾರತದ INS ಕೊಚ್ಚಿ, INS ಕವರಟ್ಟಿ, INS ಸುಮೇಧಾ

ನವದೆಹಲಿ: ಬಾಂಗ್ಲಾದೇಶ ನೌಕಾಪಡೆ ನಡೆಸುತ್ತಿರುವ ಮೊದಲ ಅಂತರರಾಷ್ಟ್ರೀಯ ಫ್ಲೀಟ್ ರಿವ್ಯೂ‌ (International Fleet Review ) ನಲ್ಲಿ ಭಾಗವಹಿಸಲು ಭಾರತೀಯ ನೌಕಾಪಡೆಯ ಹಡಗುಗಳಾದ ಐಎನ್‌ಎಸ್ ಕೊಚ್ಚಿ,‌ ಐಎನ್‌ಎಸ್ ಕವರಟ್ಟಿ ಮತ್ತು‌ ಐಎನ್‌ಎಸ್ ಸುಮೇಧಾ ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ಬೀಡು ಬಿಟ್ಟಿವೆ.

ಹಡಗುಗಳು BN IFR-22 (Bangladesh Navy International Fleet Review-2022)  ಭಾಗವಾಗಿ ಡಿಸೆಂಬರ್‌ 6 ರಿಂದ 09  ರವರೆಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿವೆ.

ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಮತ್ತು ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವವನ್ನು ಆಚರಿಸಲು ಈ ವರ್ಷ IFR-22 ಅನ್ನು ಬಾಂಗ್ಲಾದೇಶ ನೌಕಾಸೇನೆ ನಡೆಸುತ್ತಿದೆ. ಫ್ಲೀಟ್ ರಿವ್ಯೂಗೆ ಮುಖ್ಯ ಅತಿಥಿಯಾಗಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾಗವಹಿಸಿದ್ದರು.

ಭಾರತೀಯ ನೌಕಾಪಡೆಯ ಹಡಗುಗಳಾದ ಕೊಚ್ಚಿ, ಕವರಟ್ಟಿ ಮತ್ತು ಸುಮೇಧಾ ಆಧುನಿಕ ಸ್ವದೇಶಿ ವಿನ್ಯಾಸ ಮತ್ತು ದೇಶಿಯವಾಗಿ ಅಭಿವೃದ್ಧಿಪಡಿಸಿದ ಮಾರ್ಗದರ್ಶಿ ಕ್ಷಿಪಣಿ ಸ್ಟೆಲ್ತ್ ಡಿಸ್ಟ್ರಾಯರ್, ಜಲಾಂತರ್ಗಾಮಿ ವಿರೋಧಿ ಕಾರ್ವೆಟ್ ಮತ್ತು ಆಫ್-ಶೋರ್ ಪೆಟ್ರೋಲ್ ವೆಸೆಲ್ ಆಗಿದೆ. INS ಕೊಚ್ಚಿಯು ಮುಂಬೈ ಮೂಲದ ಭಾರತೀಯ ನೌಕಾಪಡೆಯ ಪಶ್ಚಿಮ ಪಡೆಯ ಒಂದು ಭಾಗವಾಗಿದೆ,  INS ಕವರಟ್ಟಿ ಮತ್ತು INS ಸುಮೇಧಾ ವಿಶಾಖಪಟ್ಟಣಂನಲ್ಲಿರುವ ಪೂರ್ವ ನೌಕಾಪಡೆಯ ಭಾಗವಾಗಿದೆ.

ಎಲ್ಲಾ ಮೂರು ಹಡಗುಗಳು ಬಹುಮುಖವಾದ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳನ್ನು ಹೊಂದಿದ್ದು, ಬಹು-ಪಾತ್ರ ಹೆಲಿಕಾಪ್ಟರ್‌ಗಳನ್ನು ಒಯ್ಯುತ್ತವೆ ಮತ್ತು ಭಾರತದ ಯುದ್ಧನೌಕೆ ನಿರ್ಮಾಣ ಸಾಮರ್ಥ್ಯಗಳನ್ನು ಸಂಕೇತಿಸುತ್ತವೆ, ‘ಆತ್ಮನಿರ್ಭರ ಭಾರತ್’ ದೃಷ್ಟಿಗೆ ಅನುಗುಣವಾಗಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top