News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತಕ್ಕೆ ಕನಿಷ್ಠ 1 ಲಕ್ಷ ಡ್ರೋನ್ ಪೈಲಟ್‌ಗಳ ಅಗತ್ಯವಿರಲಿದೆ: ಅನುರಾಗ್‌ ಠಾಕೂರ್

ನವದೆಹಲಿ: ಭಾರತವು ಡ್ರೋನ್ ತಂತ್ರಜ್ಞಾನದ ಕೇಂದ್ರವಾಗಲಿದೆ ಮತ್ತು ಮುಂದಿನ ವರ್ಷದ ವೇಳೆಗೆ ಭಾರತಕ್ಕೆ ಕನಿಷ್ಠ 1 ಲಕ್ಷ ಡ್ರೋನ್ ಪೈಲಟ್‌ಗಳ ಅಗತ್ಯ ಬೀಳುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಹೇಳಿದ್ದಾರೆ.

ನಿನ್ನೆ ಚೆನ್ನೈನಲ್ಲಿ ‘ಡ್ರೋನ್ ಯಾತ್ರಾ 2.0’ ಗೆ ಚಾಲನೆ ನೀಡಿದ ನಂತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ನಿಜವಾಗಿಯೂ ಜಗತ್ತನ್ನು ಕ್ಷಿಪ್ರ ದರದಲ್ಲಿ ಪರಿವರ್ತಿಸುತ್ತಿದೆ ಮತ್ತು ಅದರ ಅಳವಡಿಕೆ ಭೂಮಿ ಮೇಲಿನ ಕೆಲವು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುತ್ತಿದೆ, ಹೀಗಾಗಿ ತಂತ್ರಜ್ಞಾನ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ ಎಂದು ಸಚಿವರು ಹೇಳಿದರು.

“ಭಾರತವು ಮಿಲಿಯನ್ ಸಮಸ್ಯೆಗಳಿಗೆ ಬಿಲಿಯನ್ ಪರಿಹಾರಗಳನ್ನು ಹೊಂದಿದೆ” ಎಂದು ಪ್ರಧಾನಿ ಮೋದಿ ಒಮ್ಮೆ ಹೇಳಿದ್ದರು. ಒಂದು ಬಿಲಿಯನ್‌ಗೂ ಅಧಿಕ ಜನರ ದೇಶವಾಗಿ ಭಾರತವು ತಂತ್ರಜ್ಞಾನವನ್ನು ಹೆಚ್ಚು ಬಳಸಿಕೊಳ್ಳುತ್ತಿದೆ” ಎಂದಿದ್ದಾರ.

ಭಾರತದಲ್ಲಿ ಡ್ರೋನ್ ತಂತ್ರಜ್ಞಾನದ ಪ್ರಗತಿಯನ್ನು ವಿವರಿಸಿದ ಅವರು, ಬೀಟಿಂಗ್ ರಿಟ್ರೀಟ್ ಸಮಯದಲ್ಲಿ, ಐಐಟಿ ಹಳೆಯ ವಿದ್ಯಾರ್ಥಿಗಳ ನೇತೃತ್ವದ ಭಾರತೀಯ ಸ್ಟಾರ್ಟ್‌ಅಪ್ ‘ಬಾಟ್‌ಲ್ಯಾಬ್ ಡೈನಾಮಿಕ್ಸ್’ನ 1000 ‘ಮೇಡ್ ಇನ್ ಇಂಡಿಯಾ’ ಡ್ರೋನ್‌ಗಳ ಅದ್ಭುತ ಪ್ರದರ್ಶನವು ಇಡೀ ರಾಷ್ಟ್ರವನ್ನ ಮಂತ್ರಮುಗ್ಧಗೊಳಿಸಿತು ಎಂದ ಸ್ಮರಿಸಿದರು. ಸ್ವಾಮಿತ್ವ ಯೋಜನೆಯ (ಗ್ರಾಮಗಳ ಸಮೀಕ್ಷೆ ಮತ್ತು ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಮ್ಯಾಪಿಂಗ್) ಭಾಗವಾಗಿ, ಹಳ್ಳಿಗಳಲ್ಲಿ ಡ್ರೋನ್‌ಗಳ ಮೂಲಕ ಭೂಮಿ ಮತ್ತು ಮನೆಗಳ ಸಮೀಕ್ಷೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಹಳ್ಳಿ ಹಳ್ಳಿಗಳಲ್ಲಿ ಹೊಲಗಳಲ್ಲಿ ಕ್ರಿಮಿನಾಶಕ, ನ್ಯಾನೋ ಗೊಬ್ಬರ ಸಿಂಪಡಿಸಲು ಡ್ರೋನ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ  ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top