News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಡುಗಡೆಗೆ ಸಿದ್ಧವಾಗಿದೆ ಧಾರವಾಡ ಯುವಕರ ʼಮೆರಿವಾನಾ 2ʼ ಕಿರು ಚಿತ್ರ

ಧಾರವಾಡ: ಧಾರವಾಡದ ಉತ್ಸಾಹಿ ಯುವಕರು ಸೇರಿ ಒಂದು ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದು, ಈ ಚಿತ್ರದ ಹೆಸರು ‘ಮೆರಿವಾನಾ 2ʼ (ದಿ ಲಾಸ್ಟ್ ಬ್ಯಾಟಲ್) ಎಂಬುದಾಗಿದೆ.

ಮೆರಿವಾನಾ ಭಾಗ 1ರ ನಂತರ ಮುಂದುವರೆದ ಭಾಗವಾಗಿ ನಿರ್ಮಿಸಲಾದ ಈ ಚಿತ್ರದಲ್ಲಿ ಜನರಿಗೆ ಡ್ರಗ್ಸ್ ಮತ್ತು ಮಕ್ಕಳ ಕಳ್ಳ ಸಾಗಾಣಿಕೆಯ ವಿಷಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ.  ಉತ್ತಮ ಕಥಾಹಂದರದ ಜೊತೆಗೆ ಸಾಹಸಮಯ ದೃಶ್ಯಗಳನ್ನು ಮಾಡಿ ಎಲ್ಲಾ ಹುಡುಗರು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ವಿಶೇಷವೆಂದರೆ ಈ ಕಿರು ಚಿತ್ರದ ಚಿತ್ರೀಕರಣವನ್ನು ಸಂಪೂರ್ಣವಾಗಿ (ಶಯೊಮಿ ಪೋಕೂ F1)ಮೊಬೈಲಿನಲ್ಲಿ ಸೆರೆ ಹಿಡಿಯಲಾಗಿದೆ ಅಷ್ಟೇ ಅಲ್ಲದೆ ಡಬ್ಬಿಂಗ್ ಅನ್ನು ಸಹಿತ ಅದೆ ಮೊಬೈಲಿನಲ್ಲಿ ಮಾಡಲಾಗಿದೆ.

ಈಗ ಈ ಕಿರು ಚಿತ್ರವು ಬಿಡುಗಡೆ ಹಂತಕ್ಕೆ ಬಂದಿದ್ದು, ಇದೇ ಡಿಸೆಂಬರ್ 6 ರಂದು ಮಧ್ಯಾಹ್ನ 12:15 ಕ್ಕೆ ರೀಲ್ ರಿಯಲ್ ಮೋಶನ್ ಪಿಕ್ಚರ್ಸ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top