News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚುನಾವಣೆಗೆ ಸ್ಪರ್ಧಿಸಲು ಪುರುಷರಿಲ್ಲವೇ?: ಸ್ತ್ರೀ ದ್ವೇಷಿ ಹೇಳಿಕೆ ನೀಡಿದ ಇಮಾಮ್

ಅಹಮದಾಬಾದ್: ಮುಸ್ಲಿಂ ಮಹಿಳೆಯರನ್ನು ಚುನಾವಣೆಗೆ ಸ್ಪರ್ಧಿಸಲು ಆಯ್ಕೆ ಮಾಡುವವರು ಇಸ್ಲಾಂ ವಿರೋಧಿಗಳು ಮತ್ತು ಅವರು ಧರ್ಮವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಅಹಮದಾಬಾದ್‌ನ ಜಾಮಾ ಮಸೀದಿಯ ಮುಖ್ಯ ಧರ್ಮಗುರು ನೀಡಿದ ಹೇಳಿಕೆ ಅಚ್ಚರಿ ಮೂಡಿಸಿದೆ.

ಭಾನುವಾರ ಗುಜರಾತ್ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಒಂದು ದಿನ ಮೊದಲು ಆತ ಈ ಸ್ತ್ರೀದ್ವೇಷದ ಹೇಳಿಕೆಯನ್ನು ನೀಡಿದ್ದಾರೆ.

“ಇಸ್ಲಾಂ ಧರ್ಮದಲ್ಲಿ ನಮಾಜ್‌ಗಿಂತ ಮುಖ್ಯವಾದುದು ಯಾವುದೂ ಇಲ್ಲ, ಇಲ್ಲಿ ಮಹಿಳೆಯರು ಯಾರಾದರೂ ಎಲ್ಲರ ಮುಂದೆ ನಮಾಜ್ ಓದುವುದನ್ನು ನೀವು ನೋಡಿದ್ದೀರಾ? ಮಹಿಳೆಯರಿಗೆ ಇಸ್ಲಾಂನಲ್ಲಿ ನಿರ್ದಿಷ್ಟ ಸ್ಥಾನವಿದೆ ಎಂಬ ಕಾರಣಕ್ಕಾಗಿ ಅವರು ನಮಾಜ್ ಓದಲು ಮಸೀದಿಗಳಿಗೆ ಬರುವುದನ್ನು ನಿಲ್ಲಿಸಲಾಗಿದೆ. ಅದಕ್ಕಾಗಿಯೇ, ಮುಸ್ಲಿಂ ಮಹಿಳೆಯರಿಗೆ ಚುನಾವಣಾ ಟಿಕೆಟ್ ನೀಡುವವರು ಇಸ್ಲಾಂ ವಿರುದ್ಧ ಬಂಡಾಯವೆದ್ದಿದ್ದಾರೆ” ಎಂದು ಶಾಹಿ ಇಮಾಮ್ ಹೇಳಿದ್ದಾರೆ.

“ಚುನಾವಣೆಗೆ ಸ್ಪರ್ಧಿಸಲು ಪುರುಷರು ಯಾರೂ ಇಲ್ಲವೇ? ಮಹಿಳೆಯರ ಸ್ಪರ್ಧೆ ನಮ್ಮ ಧರ್ಮವನ್ನು ದುರ್ಬಲಗೊಳಿಸುತ್ತದೆ. ಮಹಿಳೆಯರನ್ನು ಶಾಸಕರು ಮತ್ತು ಕೌನ್ಸಿಲರ್‌ಗಳನ್ನಾಗ ಮಾಡಿದರೆ ಅವರು ಹಿಜಾಬ್ ಅನ್ನು ರಕ್ಷಿಸಲು ಸಾಧ್ಯವಿಲ್ಲ” ಎಂದಿದ್ದಾರೆ

 “ಚುನಾವಣೆಯಲ್ಲಿ ಹೋರಾಡಲು ಹಿಂದೂಗಳ ಮತ್ತು ಮುಸ್ಲಿಮರ ಮನೆ-ಮನೆಗೆ ಭೇಟಿ ಮಾಡಬೇಕು. ಆದ್ದರಿಂದ, ನಾನು ಮಹಿಳೆಯರ ಸ್ಪರ್ಧೆಯ ವಿರುದ್ಧ ತೀವ್ರವಾಗಿ ವಿರೋಧಿಸುತ್ತೇನೆ. ಪುರುಷರಿಗೆ ಮಾತ್ರ ಚುನಾವಣಾ ಟಿಕೆಟ್ ನೀಡಿ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top