News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಂಡಮಾನ್ & ನಿಕೋಬಾರ್‌ನ ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತ ಯೋಧರ ಹೆಸರು

ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ಕೇಂದ್ರಾಡಳಿತ ಪ್ರದೇಶದಲ್ಲಿರುವ 21 ಜನವಸತಿ ಇಲ್ಲದ ದ್ವೀಪಗಳಿಗೆ ದೇಶದ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಪಡೆದ ವೀರರ ಹೆಸರನ್ನು ಸರ್ಕಾರ ಹೆಸರಿಸಿದೆ.

21 ದ್ವೀಪಗಳಲ್ಲಿ, 16 ಉತ್ತರ ಮತ್ತು ಮಧ್ಯ ಅಂಡಮಾನ್ ಜಿಲ್ಲೆಯಲ್ಲಿವೆ, ಐದು ದ್ವೀಪಗಳು ದಕ್ಷಿಣ ಅಂಡಮಾನ್‌ನಲ್ಲಿವೆ.

ಈ ಕುರಿತು ಮಾತನಾಡಿದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಂಸದ ಕುಲದೀಪ್ ರಾಯ್ ಶರ್ಮಾ, ರಕ್ಷಣಾ ಮತ್ತು ಸ್ಥಳೀಯ ಆಡಳಿತದ ನೆರವಿನಲ್ಲಿ ವೀರಸೈನಿಕರ ಹೆಸರನ್ನು 21 ದ್ವೀಪಗಳಿಗೆ ಹೆಸರಿಸಿದ ಕೇಂದ್ರದ ಕ್ರಮ ಸ್ವಾಗತಾರ್ಹ ಎಂದರು‌

“ನಮ್ಮ ವೀರ ಸೈನಿಕರನ್ನು ಗೌರವಿಸಲು ಕೇಂದ್ರವು ಅಂಡಮಾನ್‌ನಿಂದ 21 ದ್ವೀಪಗಳನ್ನು ಆಯ್ಕೆ ಮಾಡಿದೆ ಎಂದು ನನಗೆ ಸಂತೋಷವಾಗಿದೆ. ಶಾಲಾ ಮಕ್ಕಳಿಗಾಗಿ ಒಂದು ಸಣ್ಣ ಕೈಪಿಡಿಯನ್ನು ಪ್ರಕಟಿಸಲು ನಾನು ಆಡಳಿತವನ್ನು ವಿನಂತಿಸಲು ಬಯಸುತ್ತೇನೆ, ಇದರಿಂದ ಅವರು ನಮ್ಮ ತಾಯ್ನಾಡಿಗಾಗಿ ನಡೆದ ಅತ್ಯುನ್ನತ ತ್ಯಾಗದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು ಎಂದಿದ್ದಾರೆ.

“ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗದಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪವು ‘ತೀರ್ಥಸ್ಥಳʼ ಆಗಿದೆ ಮತ್ತು ಈಗ ಪರಮವೀರ ಚಕ್ರ ಪುರಸ್ಕೃತರಿಗೆ ಅಂತಹ ಗೌರವವು ನಮಗೆ ಹೆಮ್ಮೆಯ ವಿಷಯವಾಗಿದೆ” ಎಂದು ಶರ್ಮಾ ಹೇಳಿದರು.

ಉತ್ತರ ಮತ್ತು ಮಧ್ಯ ಅಂಡಮಾನ್‌ನಲ್ಲಿರುವ ‘INAN370’ ಸಂಖ್ಯೆಯ ಮೊದಲ ಜನವಸತಿಯಿಲ್ಲದ ದ್ವೀಪಕ್ಕೆ ಮೇಜರ್ ಸೋಮನಾಥ್ ಶರ್ಮಾ ಅವರ ಹೆಸರನ್ನು ಇಡಲಾಗಿದೆ. ಇನ್ನು ಮುಂದೆ ‘INAN370’ ಅನ್ನು ‘ಸೋಮನಾಥ್ ದ್ವೀಪ’ ಎಂದು ಕರೆಯಲಾಗುತ್ತದೆ.

1947 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿದ ಸುಬೇದಾರ್ ಮತ್ತು ಗೌರವಾನ್ವಿತ ಕ್ಯಾಪ್ಟನ್ ಕರಮ್ ಸಿಂಗ್  ಹೆಸರನ್ನು ‘INAN308’ ಸಂಖ್ಯೆಯ ಮತ್ತೊಂದು ಜನವಸತಿಯಿಲ್ಲದ ದ್ವೀಪಕ್ಕೆ ಇಡಲಾಗಿದೆ. ಇನ್ನು ಮುಂದೆ ಇದು ‘ಕರಮ್ ಸಿಂಗ್ ದ್ವೀಪ’ ಎಂದು ಕರೆಯಲ್ಪಡಲಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top