ಗಾಂಧಿನಗರ: ಗುಜರಾತ್ನ ಸೌರಾಷ್ಟ್ರ, ಕಚ್ ಮತ್ತು ದಕ್ಷಿಣ ಗುಜರಾತ್ನ 89 ಕ್ಷೇತ್ರಗಳಿಗೆ ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. 2 ಕೋಟಿ 39 ಲಕ್ಷಕ್ಕೂ ಹೆಚ್ಚು ಮತದಾರರು ಈ ಹಂತದಲ್ಲಿ 788 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ.
ನಾಳೆ ಮತದಾನ ನಡೆಯಲಿರುವ 19 ಜಿಲ್ಲೆಗಳಲ್ಲಿ ಒಟ್ಟು 25,430 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕ್ಷೇತ್ರ ಒಂದು ಪರಿಸರ ಸ್ನೇಹಿ, ಒಂದು ಮಾದರಿ ಮತಗಟ್ಟೆ ಮತ್ತು ದಿವ್ಯಾಂಗ್ ಜನರು ನಿರ್ವಹಿಸುವ ಒಂದು ಮತಗಟ್ಟೆಯನ್ನು ಹೊಂದಿರುತ್ತದೆ. ಇವುಗಳ ಹೊರತಾಗಿ, 611 ಸಖಿ ಮತಗಟ್ಟೆಗಳಿದ್ದು, ಇಲ್ಲಿ ಎಲ್ಲಾ ಮತಗಟ್ಟೆ ಮತ್ತು ಪೊಲೀಸ್ ಸಿಬ್ಬಂದಿ ಮಹಿಳೆಯರೇ ಇರುತ್ತಾರೆ ಮತ್ತು 18 ಯುವ ಮತಗಟ್ಟೆಗಳಲ್ಲಿ ಯುವ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಂತದಲ್ಲಿ ಕೆಲವು ವಿಶಿಷ್ಟ ಮತಗಟ್ಟೆಗಳಿದ್ದು, ಒಂಟಿ ಮತದಾರನಿಗೆ ಗಿರ್ ಅರಣ್ಯದೊಳಗೆ ಒಂದು ಮತಗಟ್ಟ ಸ್ಥಾಪನೆಯಾಗಲಿದೆ. ಶಿಪ್ಪಿಂಗ್ ಕಂಟೈನರ್ನಲ್ಲಿ ಮತ್ತು ಅರೇಬಿಯನ್ ಸಮುದ್ರದ ದ್ವೀಪದಲ್ಲಿ ಕೂಡ ಮತಗಟ್ಟೆ ತೆರೆಯಲಾಗಿದೆ.
ಈ ನಡುವೆ ಮಧ್ಯ ಮತ್ತು ಉತ್ತರ ಗುಜರಾತ್ನಲ್ಲಿ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಲಾಗಿದ್ದು, ಮುಂದಿನ ತಿಂಗಳು 5 ರಂದು ಎರಡನೇ ಹಂತದಲ್ಲಿ ಇಲ್ಲಿ ಮತದಾನ ನಡೆಯಲಿದೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.