ನವದೆಹಲಿ: ಸ್ಕೈರೂಟ್ ಏರೋಸ್ಪೇಸ್ ದೇಶದ ಮೊದಲ ಇಂಟಿಗ್ರೇಟೆಡ್ ರಾಕೆಟ್ ಸೌಲಭ್ಯವನ್ನು ತೆಲಂಗಾಣದಲ್ಲಿ ಸ್ಥಾಪನೆ ಮಾಡಲು ಸಜ್ಜಾಗಿದೆ.
ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ಸ್ಕೈರೂಟ್ ಏರೋಸ್ಪೇಸ್ ದೇಶದ ಮೊದಲ ಇಂಟಿಗ್ರೇಟೆಡ್ ರಾಕೆಟ್ ವಿನ್ಯಾಸ, ಉತ್ಪಾದನೆ ಮತ್ತು ಪರೀಕ್ಷಾ ಸೌಲಭ್ಯವನ್ನು ಸ್ಥಾಪಿಸಲಿದೆ ಎಂದು ಮೂಲಗಳು ತಿಳಿಸಿವೆ.
ತೆಲಂಗಾಣದಲ್ಲಿ ರಾಕೆಟ್ಗಳನ್ನು ವಿನ್ಯಾಸಗೊಳಿಸಲು, ತಯಾರಿಸಲು ಮತ್ತು ಪರೀಕ್ಷಿಸಲು ಸೌಲಭ್ಯವನ್ನು ಸ್ಥಾಪಿಸಲು ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಅಲ್ಲಿನ ಐಟಿ ಸಚಿವ ಕೆ.ತಾರಕರಾಮ ರಾವ್ ಭರವಸೆ ನೀಡಿದ್ದಾರೆ.
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-ಎಸ್ ರಾಕೆಟ್ನ ಯಶಸ್ವಿ ಉಡಾವಣೆಯನ್ನು ಆಚರಿಸಲು ಅವರು ನಿನ್ನೆ ಟಿ-ಹಬ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಹೈದರಾಬಾದ್ ಮೂಲದ ಸ್ಟಾರ್ಟ್ಅಪ್ ಸ್ಕೈರೂಟ್ ಏರೋಸ್ಪೇಸ್ನ ಟಿ-ಹಬ್ನಲ್ಲಿ ಈ ತಿಂಗಳ ಆರಂಭದಲ್ಲಿ ದೇಶದ ಮೊದಲ ಖಾಸಗಿ ರಾಕೆಟ್ ಅನ್ನು ಉಡಾವಣೆ ಮಾಡಿತು.
ಹೈದರಾಬಾದ್ನ ಈ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಯು ಎಲ್ಲಾ ಅಡೆತಡೆಗಳನ್ನು ಮುರಿದಿದೆ ಎಂದು ಸಚಿವರು ಹೆಮ್ಮೆ ಮತ್ತು ಸಂತೋಷ ವ್ಯಕ್ತಪಡಿಸಿದರು. ಪ್ರಪಂಚದಾದ್ಯಂತ ಕೆಲವೇ ಕಂಪನಿಗಳು ರಾಕೆಟ್ ವಿಜ್ಞಾನವನ್ನು ವೃದ್ಧಿಸಿವೆ ಮತ್ತು ಮೊದಲ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸಿವೆ ಎಂದು ಅವರು ಮೆಚ್ಚುಗೆ ವಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.