ನವದೆಹಲಿ: ನಾಳೆ ನಡೆಯುವ ಸಂವಿಧಾನ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ
ಬೆಳಗ್ಗೆ 10 ಗಂಟೆಗೆ ಸುಪ್ರೀಂಕೋರ್ಟ್ನಲ್ಲಿ ಸಂವಿಧಾನ ದಿನಾಚರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಇ-ಕೋರ್ಟ್ ಯೋಜನೆಯಡಿ ವಿವಿಧ ಹೊಸ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಈ ಯೋಜನೆಯು ದಾವೆದಾರರು, ವಕೀಲರು ಮತ್ತು ನ್ಯಾಯಾಂಗಕ್ಕೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಮೂಲಕ ಸೇವೆಗಳನ್ನು ಒದಗಿಸುವ ಪ್ರಯತ್ನವಾಗಿದೆ. ಪ್ರಧಾನಮಂತ್ರಿಯವರು ಪ್ರಾರಂಭಿಸುತ್ತಿರುವ ಉಪಕ್ರಮಗಳಲ್ಲಿ ವರ್ಚುವಲ್ ಜಸ್ಟೀಸ್ ಕ್ಲಾಕ್, JustIS ಮೊಬೈಲ್ ಅಪ್ಲಿಕೇಶನ್ 2.0, ಡಿಜಿಟಲ್ ಕೋರ್ಟ್ ಮತ್ತು S3WaaS ವೆಬ್ಸೈಟ್ಗಳು ಸೇರಿವೆ.
ವರ್ಚುವಲ್ ಜಸ್ಟೀಸ್ ಕ್ಲಾಕ್ ನ್ಯಾಯಾಲಯದ ಪ್ರಕರಣಗಳ ವಿಲೇವಾರಿಗಳ ಸ್ಥಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವ ಮೂಲಕ ನ್ಯಾಯಾಲಯಗಳ ಕಾರ್ಯನಿರ್ವಹಣೆಯನ್ನು ಜವಾಬ್ದಾರಿಯುತ ಮತ್ತು ಪಾರದರ್ಶಕವಾಗಿಸುತ್ತದೆ. ಸಾರ್ವಜನಿಕರು ಜಿಲ್ಲಾ ನ್ಯಾಯಾಲಯದ ವೆಬ್ಸೈಟ್ನಲ್ಲಿ ಯಾವುದೇ ನ್ಯಾಯಾಲಯದ ವರ್ಚುವಲ್ ಜಸ್ಟೀಸ್ ಕ್ಲಾಕ್ ಅನ್ನು ಪ್ರವೇಶಿಸಬಹುದು.
JustIS ಮೊಬೈಲ್ ಅಪ್ಲಿಕೇಶನ್ 2.0 ಮೂಲಕ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನ ನ್ಯಾಯಾಧೀಶರು ಪ್ರಕರಣದ ಬಾಕಿ ಮತ್ತು ಅದರ ವಿಲೇವಾರಿ ಮೇಲ್ವಿಚಾರಣೆ ಮಾಡಬಹುದು.
ಡಿಜಿಟಲ್ ಕೋರ್ಟ್ ನ್ಯಾಯಾಲಯದ ದಾಖಲೆಗಳನ್ನು ಡಿಜಿಟೈಸ್ ರೂಪದಲ್ಲಿ ನ್ಯಾಯಾಧೀಶರಿಗೆ ಲಭ್ಯವಾಗುವಂತೆ ಮಾಡುವ ಉಪಕ್ರಮವಾಗಿದೆ.
S3WaaS ವೆಬ್ಸೈಟ್ ಜಿಲ್ಲಾ ನ್ಯಾಯಾಂಗಕ್ಕೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿ ಮತ್ತು ಸೇವೆಗಳನ್ನು ಪ್ರಕಟಿಸಲು ವೆಬ್ಸೈಟ್ಗಳನ್ನು ರಚಿಸಲು, ಕಾನ್ಫಿಗರ್ ಮಾಡಲು, ನಿಯೋಜಿಸಲು ಮತ್ತು ನಿರ್ವಹಿಸಲು ಚೌಕಟ್ಟಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.